ಹನೂರು: ಜಿಂಕೆ ಕೊಂಬುಗಳನ್ನು ಸಂಗ್ರಹಿಸಿದ್ದ ವ್ಯಕ್ತಿ ಬಂಧನ

ಹನೂರು,ಡಿ.5: ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಬೇಟೆ ಮಾಡಿ ಸಂಗ್ರಹಿಸಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಹನೂರು ಠಾಣೆ ಪೋಲಿಸರು ಯಶಸ್ವಿಯಾದ್ದಾರೆ.
ಹನೂರು ಕ್ಷೇತ್ರ ವ್ಯಾಪ್ತಿಯ ತೆಳ್ಳನೂರು ಗ್ರಾಮದ ಪ್ರಕಾಶ್ ಬಂಧಿತ ಆರೋಪಿ. ಇವರು ಮನೆಯಲ್ಲಿ ಜಿಂಕೆಯ ಕೊಂಬುಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹನೂರು ಪೋಲಿಸ್ ಠಾಣೆ ಆರಕ್ಷಕ ನಿರೀಕ್ಷಿಕ ಮೋಹಿತ್ ಸಹದೇವ್‍ರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, 15 ಜಿಂಕೆ ಕೊಂಬುಗಳನ್ನು ವಶ ಪಡೆಸಿದ್ದಾರೆ.
ದಾಳಿ ಸಂದರ್ಭ ಮುಖ್ಯ ಪೇದೆ ಸಿದ್ದೇಶ್, ಪೇದೆ ಬಿಳಿಗೌಡ, ರಾಜು, ಪ್ರದೀಪ್, ಶಂಕರ್ ಇನ್ನಿತರರು ಹಾಜರಿದ್ದರು.
Next Story





