ಅಲ್‍ಮದೀನ: ಬೆಳ್ಳಿ ಮಹೋತ್ಸವದ ಪ್ರಚಾರ ಸಭೆ, ಬುಲೆಟಿನ್ ಬಿಡುಗಡೆ

ಕೊಣಾಜೆ, ಡಿ. 5: ಫೆಬ್ರವರಿಯಲ್ಲಿ ನಡೆಯಿರುವ ಅಲ್‍ಮದೀನ ಬೆಳ್ಳಿಮಹೋತ್ಸವದ ಪ್ರಚಾರ ಸಭೆ ಮತ್ತು ಬುಲೆಟಿನ್ ಬಿಡುಗಡೆ ಸಮಾರಂಭವು ಅಲ್‍ಮದೀನ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.
ದುವಾ ನೆರವೇರಿಸಿದ ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ನಂತರ ಮಾತನಾಡಿದರು. ಸಿಟಿಎಂ ತಂಙಳ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಸಹಕಾರ ಯಾಚಿಸಿದರು.
ಕಾರ್ಯಕ್ರಮದಲ್ಲಿ ಮಹಮ್ಮದ್ ಸಖಾಫಿ ಅಶರಿಯ್ಯ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಯ್ಯದ್ ಕುಬೈಬ್ ತಂಙಳ್, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಶಾಕಿರ್ ಹಾಜಿ ಮಿತ್ತೂರು. ಅಬ್ದುರಹ್ಮಾನ್ ಮೊಗಪಾನೆ, ಹನೀಫ್ ಹಾಜಿ ಉಳ್ಳಾಲ್, ಮುನೀರ್ ಸಖಾಫಿ ಉಳ್ಳಾಲ್, ಆರೂಕ್ ಹಾಜಿ ಮಲಾಝ್, ಮಹಮ್ಮದ್ ಹಾಜಿ ಕಂಡಿಕ, ಜಮಾಲುದ್ದೀನ್ ಮುಸ್ಲಿಯಾರ್ ಉಳ್ಳಾಲ್, ಹಮೀದ್ ಹಾಜಿ ಬೀಜಕೊಚಿ, ಉಮರ್ ಹಾಜಿ ಸುಳ್ಯ, ಸೌಕತ್ ಹಾಜಿ, ಕುಂಞಿ ಬಾವ ಹಾಜಿ, ರಶೀದ್ ಹಾಜಿ , ಜಮಾಲುದ್ದೀನ್ ಸಖಾಫಿ ಇಬ್ರಾಹಿಂ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
Next Story