ಮಂಡ್ಯ: ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸ್ ದಾಳಿ
ಮಂಡ್ಯ, ಡಿ.5: ನಗರದ ರೌಡಿಶೀಟರ್ ಗಳ ಮನೆ ಮೇಲೆ ಬುಧವಾರ ದಾಳಿ ನಡೆಸಿರುವ ಪೊಲೀಸರ ತಂಡ ಡ್ರಾಗನ್, ಬೇಸ್‍ಬಾಲ್ ಬ್ಯಾಟ್, ಅನ್‍ಡಿಮ್ಯಾಂಡ್ ಪ್ರನೋಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಎಸ್.ಇ.ಗಂಗಾಧರಸ್ವಾಮಿ ಹಾಗೂ ಎಚ್.ಎಂ.ಶೈಲೇಂದ್ರ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ರೌಡಿಗಳಿಗೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ.
ರೌಡಿಶೀಟರ್ ಗಳಾದ ಸೂಯ, ರಘು, ಸಲ್ಮಾನ್, ಅಜಯ್, ವಿಜಯ, ಶಶಿಕುಮಾರ್, ರಾಘವೇಂದ್ರ ಎನ್, ಆಶೋಕ್ ಕೆ.ಎಂ., ಸಂತೋಷ್, ಅನಿಲ್‍ಕುಮಾರ್ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ಮಾಡಲಾಯಿತು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
Next Story





