ತೊಕ್ಕೊಟ್ಟು: ಬೇಕಲ ಉಸ್ತಾದ್‌ಗೆ ಸನ್ಮಾನ

ಉಳ್ಳಾಲ, ಡಿ. 5: ಕಾಸರಗೋಡು ಜಾಮಿಯಾ ಸಅದಿಯ್ಯಾದಲ್ಲಿ ತಾಜುಲ್ ಪುಖಾಹಾಹ್ ಬಿರುದು ಪಡೆದಿದ್ದ ಉಡುಪಿ ಸಂಯುಕ್ತ ಖಾಝಿ ಬೇಕಲ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಅವರನ್ನು ತೊಕ್ಕೊಟ್ಟು ತಾಜುಲ್ ಉಲಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೇಕಲ್ ಉಸ್ತಾದ್ ಅವರು ‘ನನಗೆ ಮದ್ರಸ ಕಲಿಸಿದ ಪ್ರಧಾನ ಉಸ್ತಾದ್ ತಾಜುಲ್ ಉಲಾಮಾ ಅವರಿಗೆ ಈ ಬಿರುದನ್ನು ಸಮರ್ಪಿಸುತ್ತೇನೆ ಎಂದರು.
ಈ ಸಂದರ್ಭ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ, ಝೈನುಲ್ ಉಲಮಾ ಮಾಣಿ ಉಸ್ತಾದ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ತೊಕ್ಕೊಟ್ಟು ತಾಜುಲ್ ಉಲಮಾ ಮಸೀದಿಯ ಅಧ್ಯಕ್ಷ ಬಾವಾ ಹಾಜಿ, ಉದ್ಯಮಿ ಉಂಞಿ ಹಾಜಿ, ಎಸ್‌ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಜಿ.ಎಂ.ಖಾಮಿಲ್ ಸಖಾಫಿ, ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಸಿಹಾಬುದ್ದೀನ್ ಸಖಾಫಿ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಯು.ಎಸ್. ಹಂಝ, ಉಳ್ಳಾಲ ಡಿವಿಜನ್ ಎಸೆಸ್ಸೆಫ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಎಸ್‌ವೈಎಸ್ ಉಳ್ಳಾಲ ಅಧ್ಯಕ್ಷ ಜಲಾಲ್ ತಂಙಳ್, ಅಬ್ಬಾಸ್ ಹಾಜಿ ಕೋಟೆಪುರ, ಹನೀಫ್ ಹಾಜಿ ಮಾಸ್ತಿಕಟ್ಟೆ, ಅಶ್ರಫ್ ಹಾಜಿ, ಫಾರೂಕ್ ಅಬ್ಬಾಸ್ ಹಾಜಿ, ಸಲೀಂ ಕನ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.