ಬೆಳ್ಮ: ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ
ಮಂಗಳೂರು, ಡಿ.5: ಬೆಳ್ಮ ಗ್ರಾಮದ ಕಾನೆಕೆರೆ-ರೆಂಜಾಡಿ ತಿರುವು ರಸ್ತೆ ಸಮೀಪದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತ್ಯಾಜ್ಯ ಎಸೆಯುತ್ತಿರುವುದರಿಂದ ಪರಿಸರವು ದುರ್ನಾತ ಬೀರುತ್ತಿದೆ. ಪರಿಸರದ ವಾತವರಣ ಕೂಡಾ ಹಾಳಾಗುತ್ತಿದೆ.ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ದೇರಳಕಟ್ಟೆ ರೆಂಜಾಡಿ ಮುಖ್ಯ ರಸ್ತೆಗೆ ತಾಗಿಕೊಂಡು ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಬಳಿ ನಿರ್ಮಿಸಲಾದ ಕಾಂಪೌಂಡ್ ಎತ್ತರವು ಅಮಿತವಾಗಿದ್ದು, ಇದರಿಂದ ವಾಹನ ಚಾಲನೆಗೆ ತೊಂದರೆಯಾಗುತ್ತಿದೆ. ಹಾಗಾಗಿ ಈ ಕಾಂಪೌಂಡ್‌ನ ಎತ್ತರವನ್ನು ತಗ್ಗಿಸಲು ಸೂಕ್ತ ಕ್ರಮ ಜರುಗಿಸುವಂತೆ ಬೆಳ್ಮ ಗ್ರಾಮ ಹೋರಾಟ ಸಮಿತಿಯು ಮನವಿ ಸಲ್ಲಿಸಿದೆ.
ಗ್ರಾಪಂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಸಿದ ನಿಯೋಗದಲ್ಲಿ ಬೆಳ್ಮ ಗ್ರಾಮ ಹೋರಾಟ ಸಮಿತಿಯ ಸಂಚಾಲಕ ಮುಹಮ್ಮದ್ ಫಾರೂಕ್ ಕಾನೆಕೆರೆ, ಉಪಸಂಚಾಲಕ ಇರ್ಶಾದ್ ಇಸ್ಮಾಯೀಲ್ ದೇರಳಕಟ್ಟೆ, ಸಮಿತಿಯ ಸದಸ್ಯರಾದ ಸುಬ್ರಮಣ್ಯ ಭಟ್ ಕಾನೆಕೆರೆ, ದೇರಳಕಟ್ಟೆ ಎಸ್‌ಡಿಟಿಯು ಮುಖಂಡ ಅಬ್ದುಲ್ ಲತೀಫ್ ಕಣಕೂರು, ಹನೀಫ್ ಬದ್ಯಾರ್ ಉಪಸ್ಥಿತರಿದ್ದರು.
Next Story