ಎಸೆಸ್ಸೆಫ್ ಕಿನ್ಯ ಬೆಳರಿಂಗೆ ಶಾಖೆಯ ಸಭೆ

ಮಂಗಳೂರು, ಡಿ.5: ಎಸೆಸ್ಸೆಫ್ ಕಿನ್ಯ ಸೆಕ್ಟರ್ ಅಧೀನದಲ್ಲಿರುವ ಎಸೆಸ್ಸೆಫ್ ಬೆಳರಿಂಗೆ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಿನ್ಯ ಬೆಳರಿಂಗೆಯಲ್ಲಿ ರುವ ಸುನ್ನಿ ಸೆಂಟರ್‌ನಲ್ಲಿ ಶಾಖಾಧ್ಯಕ್ಷ ಇಲ್ಯಾಸ್ ಕೂಡಾರರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ವಿ.ಎ.ಮುಹಮ್ಮದ್ ಮುಸ್ಲಿಯಾರ್ ಸಭೆ ಉದ್ಘಾಟಿಸಿದರು. ನೌಮಾನ್ ಕೂಡಾರ ವರದಿ ವಾಚಿಸಿದರು ಮತ್ತು ಫಯಾಝ್ ಕಿನ್ಯ ಲೆಕ್ಕ ಪತ್ರ ಮಂಡಿಸಿದರು. ಎಸ್‌ವೈಎಸ್ ಬೆಳರಿಂಗೆ ಬ್ರಾಂಚ್ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಮಾತನಾಡಿದರು.
ನೂತನ ಸಾಲಿಗೆ ಅಧ್ಯಕ್ಷರಾಗಿ ಇಲ್ಯಾಸ್ ಮದನಿ ಕೂಡಾರ, ಉಪಾಧ್ಯಕ್ಷರಾಗಿ ಹಾರಿಸ್ ಸಖಾಫಿ ಮತ್ತು ಇಸಾಕ್ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಝಹೀರ್ ಬೆಳರಿಂಗೆ, ಜೊತೆ ಕಾರ್ಯದರ್ಶಿಯಾಗಿ ಉವೈಸ್ ಮತ್ತು ಸಿದ್ದೀಕ್, ಕೋಶಾಧಿಕಾರಿಯಾಗಿ ನೌಮಾನ್ ಕೂಡಾರ ಸಹಿತ 17 ಮಂದಿ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಸಭೆಯಲ್ಲಿ ಕಿನ್ಯ ಸೆಕ್ಟರ್ ಉಪಾಧ್ಯಕ್ಷ ಅಯ್ಯೂಬ್, ಚುನಾವಣಾ ಅಧಿಕಾರಿ ಆಶಿಕ್ ಮೀಂಪ್ರಿ, ಕಿನ್ಯ ಸೆಕ್ಟರ್ ಜೊತೆ ಕಾರ್ಯದರ್ಶಿ ಬಶೀರ್ ಕೂಡಾರ ಮತ್ತಿತರರು ಪಾಲ್ಗೊಂಡಿದ್ದರು. ಝಹೀರ್ ಬೆಳರಿಂಗೆ ವಂದಿಸಿದರು.