ಅಕ್ರಮ ಮರಳುಗಾರಿಕೆ: ದೋಣಿಗಳು ವಶಕ್ಕೆ

ಕೊಣಾಜೆ, ಡಿ. 5: ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಹರೇಕಳ, ಅಡ್ಯಾರ್ ಮತ್ತು ಕಣ್ಣೂರಿನಲ್ಲಿರುವ ಮರಳುಗಾರಿಕೆ ಸ್ಥಳವನ್ನು ಪತ್ತೆ ಹಚ್ಚಿದ್ದ ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್ ಅವರ ತಂಡ ಬುಧವಾರ ಬೆಳಗ್ಗೆ ದಾಳಿ ನಡೆಸಿ, ನದಿ ಬದಿಯಲ್ಲಿ ಇಡಲಾಗಿದ್ದ ಮೂವತ್ತು ದೋಣಿಗಳನ್ನು ವಶಕ್ಕೆ ಪಡೆದಿದೆ. ದಾಳಿ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Next Story