ಬುಡೋಳಿ ನಿವಾಸಿ ಖಾಸಿಂ ಹಾಜಿ ದುಬೈಯಲ್ಲಿ ನಿಧನ

ವಿಟ್ಲ, ಡಿ. 5 : ಮಾಣಿ ಸಮೀಪದ ಬುಡೋಳಿ ನಿವಾಸಿ ದುಬೈಯಲ್ಲಿ ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೃತರನ್ನು ಬಿ. ಖಾಸಿಂ ಹಾಜಿ ಎಂದು ಗುರುತಿಸಲಾಗಿದೆ. ಅವರು ತಿಂಗಳ ಹಿಂದೆಯಷ್ಟೇ ದುಬೈಯಲ್ಲಿರುವ ತನ್ನ ಮಗಳ ಮನೆಗೆ ವಿಸಿಟಿಂಗ್ ವೀಸಾದಲ್ಲಿ ತೆರಳಿದ್ದರು. ಮಂಗಳವಾರ ಬೆಳಗ್ಗೆ ದುಬೈಯಲ್ಲಿರುವ ಮಗಳ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರು.
ಮೃತ ದೇಹವನ್ನು ಅಲ್ಲಿನ ಶಾರ್ಜಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಗುರುವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.
ಸುಲ್ತಾನ್ ಬೀಡಿ ಮಾಲಕ ದಿ. ಹಾಜಿ ಬಿ. ಹುಸೈನ್ ಅವರ ಸಹೋದರರಾಗಿರುವ ಇವರು ಮಾಣಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story