ಮಂಗಳೂರು: ಜಮೀಯ್ಯತುಲ್ ಫಲಾಹ್‌ನಿಂದ ಜೆ.ಎಫ್.ಎಜುಕೇರ್

ಮಂಗಳೂರು, ಡಿ.6: ಜಮೀಯ್ಯತುಲ್ ಫಲಾಹ್‌ನಿಂದ ಮಂಗಳೂರು ನಗರ ಘಟಕದಿಂದ ಇತ್ತೀಚೆಗೆ ಜೆ.ಎಫ್. ಸಮುದಾಯ ಭವನದಲ್ಲಿ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆಯಲ್ಲಿ ಜೆ.ಎಫ್.ಎಜುಕೇರ್ ಕ್ಯಾಂಪ್ ನೆರವೇರಿತು.
ಜೆ.ಎಫ್. ಉಡುಪಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಸಾಹುಲ್ ಹಮೀದ್ ಕೆ.ಕೆ. ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೆ.ಎಫ್. ಜಿಲ್ಲಾ ಉಪಾಧ್ಯಕ್ಷ ಫರ್ವೇಝ್ ಅಲಿ, ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್, ಕಾರ್ಯದರ್ಶಿ ಜಮಾಲುದ್ದೀನ್ ಕುದ್ರೋಳಿ, ಶಾಲಿಕೋಯ ಮತ್ತಿತರರು ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಪಿ.ಎ. ಎಜುಕೇಶನ್ ಟ್ರಸ್ಟ್ ಇನ್‌ಸ್ಟಿಟ್ಯೂಟ್‌ನ ಡಾ.ಸರ್ಫ್ರಾಝ್ ಜೆ. ಹಾಸಿರಿ, ಮಂಗಳೂರು ವಿಶ್ವವಿದ್ಯಾನಿಲಯದ ರಿಸರ್ಚ್ ಸ್ಕಾಲರ್ ಹಾಗೂ ಖ್ಯಾತ ಟ್ರೈನರ್ ಸೈಯದ್ ಅಬ್ದುಲ್ ಅಮೀನ್ ಹಾಗೂ ಮುಹಮ್ಮದ್ ಅಸ್ಫಾಕ್ ಹಾಗೂ ಮನಶಾಸ್ತ್ರಜ್ಞರು ವಿದ್ಯಾರ್ಥಿಗಳಿಗೆ ಮನಸ್ಸಿನ ದೃಢತೆ, ಅವಕಾಶ ಗಳು, ಕೋರ್ಸ್‌ಗಳ ಆಯ್ಕೆ, ಕೆಎಎಸ್, ಐಎಎಸ್, ಐಪಿಎಸ್, ಐಪಿಎಸ್, ಸಿಇಟಿ ಪರೀಕ್ಷೆ ಬಗ್ಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ‘ಸೈಕೊ ಸೋಮ್ಯಾಟಿಕ್ ಡಿಸಾರ್ಡರ್’ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆ ಹಾಗೂ ಯೋಗಕ್ಷೇಮದ ಮೇಲೆ ಅದರ ಪ್ರಭಾವ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಫರ್ವೇಝ್ ಜೆ.ಹಾಸಿಂ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಘಟಕದ ಹಿರಿಯ ಸದಸ್ಯ ಸಾದುದ್ದೀನ್ ಶಾಲಿ, ಎಂ.ಐ.ಬಾವ, ನಝೀರ್ ಅಹ್ಮದ್, ಬಿ.ಎಸ್.ಮುಹಮ್ಮದ್ ಬಶೀರ್, ಅಬೂಬಕರ್ ಜಿ.ಎಚ್., ಬಿ.ಎಂ.ಬಶೀರ್ ಅಹ್ಮದ್, ಹಾಮದ್ ಬಾವ, ಜೆ.ಜೆ.ಎಫ್ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಬೋಳಾರ್ ಇಸ್ಲಾಮಿಕ್ ಸೆಂಟರ್ ಹಾಗೂ ಬರಕಾ ಅಂತರರಾಷ್ಟ್ರೀಯ ಶಾಲೆಯ ಇಲಾಖಾ ಮುಖ್ಯಸ್ಥ ಮುಹಮ್ಮದ್ ಪುಜೈಲ್ ಕಿರಾಅತ್ ಪಠಿಸಿದರು. ಹಿರಿಯ ಸದಸ್ಯ ಇಮ್ತಿಯಾಝ್ ಖತೀಬ್ ಸ್ವಾಗತಿಸಿದರು. ಮುಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.