ಪಾಕಿಸ್ತಾನ-ಮಲೇಶ್ಯಾ ಪಂದ್ಯ ಡ್ರಾ

ಭುವನೇಶ್ವರ, ಡಿ.5: ಪಾಕಿಸ್ತಾನ ಹಾಗೂ ಮಲೇಶ್ಯಾ ತಂಡಗಳ ನಡುವೆ ಬುಧವಾರ ನಡೆದ ವಿಶ್ವಕಪ್‌ನ ಡಿ ಗುಂಪಿನ ಮತ್ತೊಂದು ಪಂದ್ಯ 1-1 ರಿಂದ ರೋಚಕವಾಗಿ ಕೊನೆಗೊಂಡಿದೆ.ಕಳಿಂಗ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಗೋಲು ಗಳಿಸಲು ವಿಫಲವಾದವು. 49ನೇ ನಿಮಿಷದಲ್ಲಿ ನಾಯಕ ಮುಹಮ್ಮದ್ ರಿಝ್ವಾನ್ ನೀಡಿದ ಪಾಸ್ ನೆರವಿನಿಂದ ಮುಹಮ್ಮದ್ ಆತಿಕ್ ಪಾಕ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, ಪಾಕ್ ಮುನ್ನಡೆಯ ಸಂಭ್ರಮ ಹೆಚ್ಚುಹೊತ್ತು ಉಳಿಯಲಿಲ್ಲ. 55ನೇ ನಿಮಿಷದಲ್ಲಿ ಗೋಲು ಬಾರಿಸಿದ ಮಲೇಶ್ಯಾದ ಫೈಝಲ್ ಪಂದ್ಯ 1-1 ರಿಂದ ಡ್ರಾನಲ್ಲಿ ಅಂತ್ಯಗೊಳ್ಳಲು ಕಾರಣರಾದರು.
Next Story





