ಕ್ರಿಕೆಟ್ಗೆ ಜೆದೇವ್ ಶಾ ಗುಡ್‌ಬೈ

ಸೌರಾಷ್ಟ್ರ, ಡಿ.5: ಸೌರಾಷ್ಟ್ರ ರಣಜಿ ಕ್ರಿಕೆಟ್ ತಂಡದ ನಾಯಕ ಹಾಗೂ ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಪುತ್ರ ಜೈದೇವ್ ಶಾ, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಬುಧವಾರ ತಿಳಿಸಿದೆ. ಡಿ.6ರಿಂದ ಕರ್ನಾಟಕ ಹಾಗೂ ಸೌರಾಷ್ಟ್ರದ ಮಧ್ಯೆ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯಲಿರುವ ರಣಜಿ ಪಂದ್ಯವೇ ಅವರ ಕೊನೆಯ ಪಂದ್ಯವಾಗಲಿದೆ ಎಂದು ಅಸೋಸಿಯೇಶನ್ ತಿಳಿಸಿದೆ. 119 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಶಾ, 5,253 ರನ್ ಗಳಿಸಿದ್ದಾರೆ. 2008ರ ಇಸ್ರೇಲ್ ಪ್ರವಾಸಕ್ಕೆ ಅವರು ಭಾರತ ‘ಎ ’ ತಂಡದ ನಾಯಕತ್ವ ವಹಿಸಿದ್ದರು. 110 ಪಂದ್ಯಗಳಲ್ಲಿ ಅವರು ಸೌರಾಷ್ಟ್ರ ರಣಜಿ ತಂಡವನ್ನು ಮುನ್ನಡೆಸಿದ್ದಾರೆ. ಶಾ ಅವರ ನಾಯಕತ್ವದಲ್ಲಿ ಸೌರಾಷ್ಟ್ರ ತಂಡ, 2012-13 ಹಾಗೂ 2015-16ರ ಸಾಲಿನಲ್ಲಿ ರನ್ನರ್ ಅಪ್ ಆಗಿತ್ತು. 2 ಬಾರಿ ಸೆಮಿಫೈನಲ್‌ವರೆಗೂ ತಲುಪಿತ್ತು.
Next Story





