ವಿಂಡೀಸ್ ತಂಡಕ್ಕೆ ವಾಪಸಾದ ಡರೆನ್ ಬ್ರಾವೊ

ಗಯಾನ, ಡಿ.5: ಸುಮಾರು ಎರಡು ವರ್ಷಗಳ ಬಳಿಕ ಮಧ್ಯಮ ಕ್ರಮಾಂಕದ ದಾಂಡಿಗ ಡರೆನ್ ಬ್ರಾವೊ ವೆಸ್ಟ್ ಇಂಡೀಸ್ ಬುಧವಾರ ಪ್ರಕಟಿಸಿರುವ 15 ಸದಸ್ಯರ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.
ವಿಂಡೀಸ್ ತಂಡ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಎಡಗೈ ದಾಂಡಿಗ ಬ್ರಾವೊ 2016ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ 96ನೇ ಪಂದ್ಯವನ್ನು ಆಡಿದ್ದರು. ಇತ್ತೀಚೆಗೆ ಭಾರತದಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲಿ ವಿಂಡೀಸ್ ಪಾಳಯಕ್ಕೆ ವಾಪಸಾಗಿದ್ದರು. ರವಿವಾರ ಢಾಕಾದಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಟ್ವೆಂಟಿ-20 ಕ್ರಿಕೆಟ್‌ನ ಖಾಯಂ ನಾಯಕ ಕಾರ್ಲೊಸ್ ಬ್ರಾತ್‌ವೇಟ್ ಹಾಗೂ ರೋಸ್ಟನ್ ಚೇಸ್ ಸ್ಥಾನ ಪಡೆದಿದ್ದಾರೆ. ನಾಯಕ ಜೇಸನ್ ಹೋಲ್ಡರ್ ಅನುಪಸ್ಥಿತಿಯಲ್ಲಿ ಬ್ಯಾಟ್ಸ್‌ಮನ್ ರೊವ್‌ಮನ್ ಪೊವೆಲ್ ತಂಡದ ಹಂಗಾಮಿ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಮೊದಲ ಏಕದಿನ ಡಿ.9ಕ್ಕೆ, 2ನೇ ಹಾಗೂ 3ನೇ ಪಂದ್ಯ ಡಿ.11 ಹಾಗೂ 14ರಂದು ನಡೆಯಲಿದೆ.
ವೆಸ್ಟ್‌ಇಂಡೀಸ್ ತಂಡ
►ರೊವ್‌ಮನ್ ಪೊವೆಲ್(ನಾಯಕ), ಮರ್ಲೊನ್ ಸ್ಯಾಮುಯೆಲ್ಸ್, ದೇವೇಂದ್ರ ಬಿಶೂ, ರೋಸ್ಟನ್ ಚೇಸ್, ಚಂದ್ರಪಾಲ್ ಹೇಮರಾಜ್, ಶಿಮ್ರ್‌ನ್ ಹೆಟ್ಮೆಯರ್, ಡರೆನ್ ಬ್ರಾವೊ, ಶೈ ಹೋಪ್,ಕಾರ್ಲೊಸ್ ಬ್ರಾತ್‌ವೇಟ್, ಕೀಮೊ ಪಾಲ್, ಕಿರನ್ ಪೊವೆಲ್, ಫ್ಯಾಬಿಯನ್ ಅಲ್ಲೆನ್, ಕೆಮರ್ ರೋಚ್, ಸುನೀಲ್ ಅಂಬ್ರಿಸ್, ಒಶಾನೆ ಥಾಮಸ್.







