ಮೂಡಿಗೆರೆ ಯಲ್ಲಿ ಶರೀಅತ್ ಸಮಾವೇಶದ ಪ್ರಚಾರ ಸಭೆ

ಮೂಡಿಗೆರೆ, ಡಿ.6: ಮಂಗಳೂರಿನಲ್ಲಿ ಡಿ.9ರಂದು ನಡೆಯುವ ಶರೀಅತ್ ಸಂರಕ್ಷಣಾ ಸಮಾವೇಶದ ಪ್ರಚಾರ ಸಭೆಯು ಮೂಡಿಗೆರೆ ತಾಲೂಕು ಸಂಯುಕ್ತ ಜಮಾತಿನ ಆಶ್ರಯದಲ್ಲಿ ಇಲ್ಲಿನ ಕೇಂದ್ರ ಬದ್ರಿಯಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.
ಸ್ವಾಗತ ಸಮಿತಿಯ ನಾಯಕರನ್ನು ಬರಮಾಡಿಕೊಂಡು ಸ್ವಾಗತಿಸಿ ಮಾತನಾಡಿದ ಸ್ಥಳೀಯ ಖತೀಬ್ ಹಾಜಿ ಯಾಕೂಬ್ ದಾರಿಮಿ, ಶರೀಅತ್ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು ಯಾವುದೇ ಬೆಲೆ ತೆತ್ತಾದರೂ ಅದನ್ನು ಉಳಿಸಿಕೊಳ್ಳಲು ನಾವು ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಡೆಯುವ ಸಮ್ಮೇಳನದ ಯಶಸ್ಸಿಗೆ ಶ್ರಮಿಸುವಂತೆ ಕರೆ ನೀಡಿದರು.
ಅಸ್ಸೈಯದ್ ಹಬೀಬುರ್ರಹ್ಮಾನ್ ತಂಙಳ್ ಸೂರಿಂಜೆ ದುಆಗೈದರು. ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಬಿ.ಮುಹಮ್ಮದ್ ದಾರಿಮಿ ಮುಲ್ಕಿ, ಹುಸೈನ್ ದಾರಿಮಿ ಸಾಂದರ್ಭಿಕವಾಗಿ ಮಾತನಾಡಿದರು.
ಅಬ್ದುರ್ರಝಾಕ್ ಬಿ.ಸಿ.ರೋಡ್, ರಫೀಕ್ ಹಾಜಿ ಕೊಡಾಜೆ, ರಶೀದ್ ಹಾಜಿ ಪರ್ಲಡ್ಕ, ಇಸ್ಮಾಯೀಲ್ ಕೊಡಾಜೆ ಕೇಂದ್ರೀಯ ಸಮಿತಿಯ ಪ್ರತಿನಿದಿಗಳಾಗಿ ಹಾಜರಾಗಿದ್ದರು.
ಹಂಝ ಉಸ್ತಾದ್, ಯಾಕೂಬ್ ಫೈಝಿ, ಅಬ್ದುಲ್ಲ ದಾರಿಮಿ, ಸುಲೈಮಾನ್ ಮುಸ್ಲಿಯಾರ್, ಅಕ್ರಮ್ ಹಾಜಿ, ಸಿ.ಕೆ.ಇಬ್ರಾಹೀಂ ಹಾಜಿ, ಇಬ್ರಾಹೀಂ ಹಾಜಿ ಹ್ಯಾಂಡ್ ಪೋಸ್ಟ್, ಕೌಸರ್ ಮೋನು ಹಾಜಿ, ಅಯ್ಯೂಬ್ ಹಾಜಿ, ಹಾಜಬ್ಬ, ಹಮ್ಮಬ್ಬ ಹಾಜಿ, ಹನೀಫ್ ಅರಬಿ, ಅಝೀಝ್ ಅರಬಿ, ಹನೀಫ್ ಬಿಲಗುಳ, ಸಿನಾನ್ ಫೈಝಿ, ಝುಬೈರ್ ಫೈಝಿ, ಶರಫುದ್ದೀನ್ ಮುಸ್ಲಿಯಾರ್, ಶಂಸುದ್ದೀನ್ ಅರ್ಷದಿ, ಇಸ್ಹಾಖ್ ಬೂತನಕಾಡು ಹಾಮದ್ ಬಾವ ಬಿಳಗುಳ, ಇಬ್ರಾಹೀಂ ಹಾಜಿ, ಲತೀಫ್ ಹಾಜಿ, ಮಹಮ್ಮದ್ ಎಚ್.ಎ., ಹಮೀದ್, ಮೊಹಿದೀನ್ ಸೇಟ್ ಹಾಗೂ ರೇಂಜ್, ಮ್ಯಾನೇಜ್ಮೆಂಟ್, ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು.
ತಾಲೂಕಿನಾದ್ಯಂತ ವಾಹನ ಪ್ರಚಾರ ನಡೆಸಲು ಇದೇ ಸಂದರ್ಭದಲ್ಲಿ ನಿರ್ಣಯಿಸಲಾಯಿತು