ಡಿ.7: ಕುಂಜತ್ತೂರಿನಲ್ಲಿ ನೂತನ ಮದ್ರಸ ಕಟ್ಟಡ ಉದ್ಘಾಟನೆ
ಮಂಜೇಶ್ವರ, ಡಿ.6: ಕುಂಜತ್ತೂರು ಜಮಾಅತ್ ಸಮಿತಿಯ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಮಹ್ದನುಲ್ ಉಲೂಂ ಮದ್ರಸಕ್ಕೆ ಕುಂಜತ್ತೂರು ಪ್ರವಾಸಿ ಫೋರಂ(ಜಿಸಿಸಿ) ನಿರ್ಮಿಸಿ ಕೊಟ್ಟಿರುವ ನೂತನ ಕಟ್ಟಡ ಡಿ.7ರಂದು ಸಂಜೆ ಕುಂಜತ್ತೂರು ಮಸೀದಿ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಟ್ಟಡವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿದ್ದಾರೆ.
ಬಳಿಕ ಜಮಾಅತ್ ಅಧ್ಯಕ್ಷ ಡಾ.ಕೆಎ.ಖಾದರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಕುಂಜತ್ತೂರು ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಆಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಈ ಸಂದರ್ಭ ಕುಂಜತ್ತೂರು ಖತೀಬ್ ಕೆ.ಹಾಶಿರ್ ಅಲ್ ಹಾಮಿದಿ, ಮೊಯ್ದಿನ್ ಕುಂಞಿ ಹಾಜಿ, ಇಬ್ರಾಹೀಂ ಹಾಜಿ ಕೆ.ಎ., ಸಯ್ಯದ್ ಎಂ.ಕೆ.ಎ.ಆರ್.ಅಬ್ದುಲ್ ರಹ್ಮಾನ್ ಹಾಜಿ, ಕೆ.ಕೆ.ಮುಹಮ್ಮದ್ ಫೈಝಿ, ತೌಸೀಫ್ ಆಹ್ಮದ್ ಹನೀಫಿ ಮೊದಲಾದವರು ಉಪಸ್ಥರಿರುವರು.
ಮಗ್ರಿಬ್ ನಮಾಝ್ ಬಳಿಕ ಅಬೂಬಕರ್ ಸಿದ್ದೀಖ್ ಅರ್ ಹರಿ ಪಯ್ಯನ್ನೂರು ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಶನಿವಾರ ಸಮಾರೋಪ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







