ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿಯ ಪರಿನಿಬ್ಭಾಣ ದಿನ

ಮಂಗಳೂರು, ಡಿ.6: ಸಂವಿಧಾನ ಶಿಲ್ಪಿಡಾ. ಬಿ.ಆರ್. ಅಂಬೇಡ್ಕರ್‌ರ 62ನೇ ಪರಿನಿಬ್ಭಾಣ ದಿನವನ್ನು ಗುರುವಾರ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ಈವತ್ತು ರಾಷ್ಟ್ರದಾದ್ಯಂತ ಎಲ್ಲರೂ ಸಮಾನವಾಗಿ ಬಾಳುವಂತಾಗಿದೆ. ಆದರೆ ಕೇಂದ್ರದ ಸಚಿವರೊಬ್ಬರು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿರುವುದು ದುರದೃಷ್ಟಕರ ಎಂದರಲ್ಲದೆ ಅಂಬೇಡ್ಕರ್‌ರ ಆದರ್ಶವನ್ನು ಜೀವನದಲ್ಲಿ ಅಳವಡಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಂಬೇಡ್ಕರ್ ನಿರ್ಮಿಸಿದ ಸಂವಿಧಾನದಿಂದಾಗಿ ಭಾರತವು ಬಲಿಷ್ಠವಾಗಿದೆ. ಅವರು ನೀಡಿದಂತಹ ಸಂವಿಧಾನವನ್ನು ವಿಶ್ವವೇ ಒಪ್ಪಿಕೊಂಡು ಮನ್ನಣೆ ನೀಡಿದೆ ಎಂದರು.
ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ನವೀನ್ ಡಿಸೋಜ, ಡಿಸಿಸಿ ಉಪಾಧ್ಯಕ್ಷರಾದ ಪದ್ಮನಾಭ ನರಿಂಗಾನ, ಸದಾಶಿವ ಉಳ್ಳಾಲ್, ಮನಪಾ ಮುಖ್ಯ ಸಚೇತಕ ಎಂ.ಶಶಿಧರ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿಗಳಾದ ಪ್ರೇಮ್ ಬಲ್ಲಾಳ್‌ಭಾಗ್, ಶುಭೋದಯ ಆಳ್ವ, ಆರೀಫ್ ಬಾವ, ವೈ.ಮುಹಮ್ಮದ್ ಬ್ಯಾರಿ, ಜಯಶೀಲಾ ಅಡ್ಯಂತಾಯ, ಪಿಯೂಸ್ ಮೊಂತೆರೋ, ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸೊಹಾನ್ ಎಸ್.ಕೆ., ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ಮನಪಾ ಸದಸ್ಯರಾದ ರಜನೀಶ್, ಅಶೋಕ್ ಡಿ.ಕೆ., ಪ್ರತಿಭಾ ಕುಳಾಯಿ, ಅಪ್ಪಿ, ಕೇಶವ ಮರೋಳಿ ಹಾಗೂ ನಾಗವೇಣಿ, ಬಿ.ಎಂ.ಭಾರತಿ, ತೆರೇಝಾ ಪಿಂಟೋ, ದಿನೇಶ್ ಪಿ.ಎಸ್., ಪ್ರಕಾಶ್ ಕೋಡಿಕಲ್, ಅಬೂಬಕರ್ ಕುದ್ರೋಳಿ, ಶ್ರೇಯಸ್ ಉಪಸ್ಥಿತರಿದ್ದರು.