ಸಹ್ಯಾದ್ರಿ ವಿದ್ಯಾರ್ಥಿಗಳಿಂದ ಅಂಗನವಾಡಿಯಲ್ಲಿ ವಿನೂತನ ಯೋಜನೆ

ಮಂಗಳೂರು, ಡಿ. 6: ನಗರದ ಸಹ್ಯಾದ್ರಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಟೀಮ್ ಟ್ರೈಗಾನ್ ವತಿಯಿಂದ ಬೈಕಂಪಾಡಿಯ ಅಂಗರಗುಂಡಿ ಸರಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ಜವಾಬ್ದಾರಿ ವಿನೂತನ ಯೋಜನೆ ನಡೆಯಿತು.
ಸಾಮಾಜಿಕ ಕಳಕಳಿಯ ಹಾಗೂ ಜವಾಬ್ದಾರಿ ಯೋಜನೆಯನ್ನು ಕಾರ್ಯಗತಗೊಳಿಸಲು ಟ್ರೈಗಾನ್ ತಂಡದೊಂದಿಗೆ ಸಹ್ಯಾದ್ರಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಂಗನವಾಡಿಗೆ ತೆರಳಿ ಸಾಮಾನ್ಯ ಮಕ್ಕಳ ಆಟದ ಮೈದಾನದಲ್ಲಿದ್ದ ವಸ್ತುಗಳನ್ನು ಮರುಬಳಕೆ ಮಾಡಿದರಲ್ಲದೆ ಪರಿಸರ ಸ್ನೇಹಿ ಮತ್ತು ಸುಲಭವಾಗಿ ಸರಿಪಡಿಸಬಹುದಾದ ಶೌಚಾಲಯ ನಿರ್ಮಿಸಿ ಗಮನ ಸೆಳೆದರು.
ಈ ಯೋಜನೆಗೆ ಇಂಚಾರಾ ಫೌಂಡೇಶನ್ ನಿಧಿಯಿಂದ 30,000 ರೂ. ನೀಡಲಾಯಿತು. ಸಹ್ಯಾದ್ರಿ ವಿದ್ಯಾರ್ಥಿ ತಂಡದಲ್ಲಿ ಟ್ರೈಗಾನ್ ಮುಖ್ಯಸ್ಥ ಅಲೆಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಶ್ವೇತಾ ಎಲ್.ಜಿ., ಜ್ಯೂವಿನ್ ಮಾರಿಯಾ ಡಿಕುನ್ಹಾ ಮತ್ತು ವಿನ್ಸನ್ ಡೇನಿಯಲ್ ಅಲ್ಮೇಡಾ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೆಲಸ ಮಾಡಿರುತ್ತಾರೆ.
ಇಂಚರ ನಿರ್ದೇಶಕ ಫೌಂಡೇಶನ್ ಪ್ರಿತಮ್ ರೋಡ್ರಿಗಸ್, ಸಹ್ಯಾದ್ರಿ ಶಿಕ್ಷಕ ಡಾ. ಪ್ರೇಮಾನಂದ ಶೆಣೈ ಮತ್ತು ಪ್ರೊ. ಸುನೀಲ್ ಕುಮಾರ್ ರೈ ಮಾರ್ಗದರ್ಶನ ನೀಡಿದರು.