ಬಾಬರಿ ಮಸೀದಿ ಪುನರ್ ನಿರ್ಮಿಸಲು ಆಗ್ರಹಿಸಿ ಲೀಗ್ ಮನವಿ
ಮಂಗಳೂರು, ಡಿ. 6: ಸಂಘಪರಿವಾರದ ಕಾರ್ಯಕರ್ತರಿಂದ ಧ್ವಂಸಗೈಯಲ್ಪಟ್ಟ ಬಾಬರಿ ಮಸೀದಿಯನ್ನು ಪುನಃ ನಿರ್ಮಿಸಬೇಕು ಎಂದು ಒತ್ತಾಯಿಸಿ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮುಸ್ಲಿಮರ ನಂಬಿಕೆಯ ಮೇಲೆ ಚ್ಯುತಿ ಬರದಂತೆ ತೀರ್ಪು ನೀಡಬೇಕು. ಮುಸ್ಲಿಮರ ಆತ್ಮಾಭಿಮಾನವಾದ ಬಾಬರಿ ಮಸೀದಿಯನ್ನು ಪುನಃ ನಿರ್ಮಾಣ ಮಾಡಬೇಕು ಎಂದು ಲೀಗ್ ನಿಯೋಗ ಮನವಿ ಸಲ್ಲಿಸಿದೆ.
ಈ ಸಂದರ್ಭ ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ಸಿ. ಅಹ್ಮದ್ ಜಮಾಲ್, ರಿಯಾಝ್ ಹರೇಕಳ, ಇಸ್ಮಾಯಿಲ್, ಅಬ್ದುಲ್ ಅಝೀಝ್ ಸುರತ್ಕಲ್, ಮುಹಮ್ಮದ್ ಹಾಜಿ ಮತ್ತಿತರರು ಪಾಲ್ಗೊಂಡಿದ್ದರು.
Next Story