ಫೈಟಿಂಗ್: ಮುಹಮ್ಮದ್ ಫಝಲ್‌ಗೆ ಚಿನ್ನದ ಪದಕ

ಮಂಗಳೂರು, ಡಿ.6: ಬಂಟ್ವಾಳ ತಾಲೂಕಿನ ಆಗ್ರಾರ ಹೊಲಿ ಸೇವಿಯರ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಫಝಲ್ (11) ಬೆಂಗಳೂರಿನ ಯಲಹಂಕದಲ್ಲಿ ಇತ್ತೀಚೆಗೆ ನಡೆದ ಪ್ರಥಮ ರಕ್ಷಾ ಕಪ್ ಟೇಕ್ವಾಂಡೋ ರಾಜ್ಯಮಟ್ಟದ ಪಂದ್ಯಾಟದ ಫೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಪೂಮ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿರುತ್ತಾರೆ.
ಅಬ್ದುಲ್ಲತೀಫ್-ನಿಶಾನ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಫಝಲ್ ಅವರು ಇಸಾಕ್ ನಂದಾವರ ಅವರಿಂದ ತರಬೇತಿ ಪಡೆದಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story