Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊಡಗಿನ ಸಂತ್ರಸ್ತರಿಗಾಗಿ...

ಕೊಡಗಿನ ಸಂತ್ರಸ್ತರಿಗಾಗಿ ನಿರ್ಮಾಣಗೊಳ್ಳಲಿದೆ ಭೂಕಂಪನ ನಿರೋಧಕ ತಂತ್ರಜ್ಞಾನದ ಮನೆಗಳು

ಡಿ.7 ರಂದು ಮುಖ್ಯಮಂತ್ರಿಯಿಂದ ಶಂಕುಸ್ಥಾಪನೆ

ವಾರ್ತಾಭಾರತಿವಾರ್ತಾಭಾರತಿ6 Dec 2018 6:22 PM IST
share
ಕೊಡಗಿನ ಸಂತ್ರಸ್ತರಿಗಾಗಿ ನಿರ್ಮಾಣಗೊಳ್ಳಲಿದೆ ಭೂಕಂಪನ ನಿರೋಧಕ ತಂತ್ರಜ್ಞಾನದ ಮನೆಗಳು

ಮಡಿಕೇರಿ, ಡಿ.6: ಜಿಲ್ಲೆಯ ಭೂ ಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ತೀರಾ ವಿಳಂಬವಾಗುತ್ತಿದೆ ಎಂದು ಆರೋಪದ ನಡುವೆ ಸಂತ್ರಸ್ತರ ಹೋರಾಟ ಸಮಿತಿಯೂ ರಚನೆಗೊಂಡಿದ್ದು, ಹೋರಾಟಕ್ಕೆ ಅಣಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮನೆಗಳ ನಿರ್ಮಾಣ ಕಾರ್ಯಕ್ಕೆ ಡಿ.7 ರಂದು ಚಾಲನೆ ನೀಡಲು ಮುಂದಾಗಿದೆ.

ಜಿಲ್ಲೆಯ ಭೂ ಕುಸಿತ ಸಂತ್ರಸ್ಥರಿಗಾಗಿ ಸರ್ಕಾರದ ಆಹ್ವಾನದ ಮೇರೆಗೆ ವಿವಿಧ ಕಂಪೆನಿಗಳು 6 ಮನೆಗಳ ಮಾದರಿಗಳನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳಿಸಿಕೊಟ್ಟಿತ್ತಿ. ಅವುಗಳಲ್ಲಿ ರಾಜ್ಯ ಸರ್ಕಾರದ ಅಧೀನದ ರಾಜೀವ್ ಗಾಂದಿ ಗ್ರಾಮೀಣ ವಸತಿ ನಿಗಮ ನಿಯಮಿತ ವಿನೂತನ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮನೆಯ ಮಾದರಿ ಆಯ್ಕೆಯಾಗಿದೆ. ಖಾಸಗಿ ಕಂಪೆನಿಗಳ ಪೈಪೋಟಿಯ ನಡುವೆಯೂ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ನಿರ್ಮಾಣದ ಮಾದರಿ ಆಯ್ಕೆಯಾಗಿರುವುದು ಗಮನಾರ್ಹ.

ವಿಶೇಷ ತಂತ್ರಜ್ಞಾನದ ಮನೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಜಿಲ್ಲೆಯ 840 ಸಂತ್ರಸ್ತರಿಗಾಗಿ ವಿವಿಧೆಡೆಗಳಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ. ರಾಜೀವ್ ವಸತಿ ನಿಗಮ ನಿರ್ಮಿಸಿರುವ ಈ ಮನೆಗಳ ವಿಶೇಷತೆ ಏನೆಂದರೆ ಇವುಗಳ ಮೇಲೆ ಅಪಾರ ಪ್ರಮಾಣದ ಮಣ್ಣು ಕುಸಿದರೂ ಇವು ಕುಸಿಯುವುದಿಲ್ಲ. ಇತರ ಸಾಂಪ್ರದಾಯಿಕ ಟಾರಸಿ ಮನೆಗಳ ನಿರ್ಮಾಣದಲ್ಲಿ ಪಿಲ್ಲರ್ ಗಳನ್ನು ಬಳಸಲಾಗಿದ್ದರೆ ಇದರಲ್ಲಿ ಪಿಲ್ಲರ್ ಇರುವುದಿಲ್ಲ.

ಆರ್‍ಸಿಸಿ ಛಾವಣಿಗೆ ಬಳಸಲಾಗಿರುವ ಕಬ್ಬಿಣದ ಕಂಬಿಗಳು ಗೋಡೆಯಿಂದ ನೆಲದವರೆಗೂ ಇಳಿದಿವೆ. ಅಂದರೆ 40 ಅಡಿ ಕಬ್ಬಿಣದ ರಾಡನ್ನೇ ತುಂಡರಿಸದೇ ಹಾಗೆಯೇ ಬಾಗಿಸಿ ಬಳಸಲಾಗಿದೆ. ಇದರಿಂದ ಮನೆ ಹೆಚ್ಚು ಗಟ್ಟಿ ಮುಟ್ಟಾಗಿದ್ದು, ಯಾವುದೇ ಭಾಗದಿಂದ ಮನೆಗೆ ಒತ್ತಡ ಅಪ್ಪಳಿಸಿದರೂ ಅಪಾಯವಿಲ್ಲ. ರಾಜೀವ್ ವಸತಿ ನಿಗಮ ಇದೇ ತಂತ್ರಜ್ಞಾನದಲ್ಲಿ ಕನಕಪುರ ಹಾಗೂ ಇತರೆಡೆಗಳಲ್ಲಿ ಸಿಂಗಲ್ ಬೆಡ್ ರೂಮಿನ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಕೊಡಗಿನ ಸಂತ್ರಸ್ತರಿಗೆ ತಲಾ 9.85 ಲಕ್ಷ ರೂ. ವೆಚ್ಚದಲ್ಲಿ ಎರಡು ಬೆಡ್ ರೂಮುಗಳ ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಇದು ದೇಶದಲ್ಲೇ ಪ್ರಥಮ ಎಂದು ಪುರ್ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾದಿಕಾರಿ ಎಂ.ಕೆ.ಜಗದೀಶ್ ಅವರು ಹೇಳಿದರು.

ದೇಶದಲ್ಲಿ ಸಂತ್ರಸ್ತರಿಗಾಗಿ ಈ ವರೆಗೆ ಸಿಂಗಲ್ ಬೆಡ್ ರೂಮ್‍ನ ಮನೆಗಳನ್ನು ಮಾತ್ರ ನಿರ್ಮಿಸಿಕೊಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಎರಡು ಬೆಡ್ ರೂಂ ಗಳನ್ನು ನಿರ್ಮಿಸಲಾಗುತ್ತಿದೆ. ಅಷ್ಟೇ ಅಲ್ಲ ಈ ಮನೆಗಳ ಮೇಲ್ಚಾವಣಿಯನ್ನು ಸಮತಟ್ಟಾಗಿ ನಿರ್ಮಿಸಲಾಗುತ್ತಿದ್ದು ಇದರಿಂದಾಗಿ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇದರ ಮೇಲೆ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಬಹುದಾಗಿದೆ.

ಮನೆ ನಿರ್ಮಾಣದ ತಂತ್ರಜ್ಞಾನದ ಕುರಿತು ಮಹಿತಿ ನೀಡಿದ ಯೋಜನಾ ನಿರ್ದೆಶಕ ಹೆಚ್.ಶ್ರೀನಿವಾಸ್ ಅವರು ಇಡೀ ಮನೆಯು 5 ರಿಂದ 6 ಇಂಚಿನಷ್ಟು ಕಾಂಕ್ರೀಟ್ ಗೋಡೆಯನ್ನು ಹೊಂದಿದ್ದು ಇದರ ನಿರ್ಮಾಣದಲ್ಲಿ ಕಲ್ಲು ಅಥವಾ ಇಟ್ಟಿಗೆಯನ್ನು ಬಳಸುವುದಿಲ್ಲ ಎಂದರು. ಇಡೀ ಮನೆಯೇ ಕಾಂಕ್ರೀಟ್ ಕೋಶದಂತೆ ಮತ್ತು ಮೊನೊಲಿಥಿಕಲ್ ನಂತೆ ಇದ್ದು ಇದು ಸಂಪೂರ್ಣ ಭೂಕಂಪ ನಿರೋಧಕವಾಗಿದೆ ಎಂದರು. ಮನೆಗಳ ನಿರ್ಮಾಣಕ್ಕೆ ಸಂಪೂರ್ಣವಾಗಿ ಇತರ ಕಾಂಕ್ರೀಟ್ ನಿರ್ಮಾಣಕ್ಕೆ ಬಳಸುವಂತೆಯೇ ಕಬ್ಬಿಣದ ಮೌಲ್ಡ್ ಗಳನ್ನು ಬಳಸಲಾಗುವುದು. ಈ ಮೌಲ್ಡ್ ಗಳನ್ನು ಬಿಚ್ಚಿದ ಕೂಡಲೇ ಮನೆ ನಿರ್ಮಾಣವಾದಂತೆಯೇ ಎಂದು ಶ್ರೀನಿವಾಸ್ ಹೇಳಿದ್ದು, ಈ ಮನೆಯ ನಿರ್ಮಾಣಕ್ಕೆ 20 ದಿನ ಬೇಕಾಗುತ್ತದೆ ಎಂದರು.

ಕಾಂಕ್ರೀಟ್ ಗೋಡೆಗಳ ನಿರ್ಮಾಣದ ಸಂದರ್ಭದಲ್ಲೇ ವಿದ್ಯುತ್ ಸಂಪರ್ಕದ ಹಾಗೂ ನೀರಿನ ಪೈಪ್ ಗಳನ್ನೂ ಅಳವಡಿಸುವುದರಿಂದ ವೆಚ್ಚವೂ ಕಡಿಮೆ ಹಾಗೂ ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಮನೆಯ ಕಿಟಕಿಗಳಿಗೆ ಅಲ್ಯುಮೀನಿಯಂ ಹಾಗೂ ಬಾಗಿಲುಗಳಿಗೆ ಪರಿಸರ ಸ್ನೇಹಿ ಮರ ಬಳಸಲಾಗುವುದು ಎಂದರು.

ಈ ಮಾದರಿಯ ಭೂಕಂಪ ನಿರೋಧಕ ಮನೆಗಳನ್ನು ವಿಶ್ವದಾದ್ಯಂತ ನಿರ್ಮಿಸಲಾಗುತ್ತಿದ್ದು, ರಾಜೀವ್ ವಸತಿ ನಿಗಮ 2012 ರಿಂದ ರಾಜ್ಯದಲ್ಲಿ ಸುಮಾರು 3,500 ಮನೆಗಳನ್ನು ನಿರ್ಮಿಸಿದೆ. ಆಂಧ್ರ ಪ್ರದೇಶದ ವಸತಿ ನಿಗಮವು ಆಂಧ್ರ ರಾಜ್ಯಾದ್ಯಂತ ಇಂತಹ 4 ಲಕ್ಷ ಮನೆಗಳನ್ನು ನಿರ್ಮಿಸಿದೆ.
ಕರ್ನಾಟಕ ರಾಜ್ಯ ಸರ್ಕಾರ ಕೊಡಗಿನ ಸಂತ್ರಸ್ತರಿಗಾಗಿ ಸಕಾಲದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟರೆ ಉದ್ದೇಶಿತ ಯೋಜನೆ ಯಶಸ್ವಿಯಾಗಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X