ಭಟ್ಕಳ: ದೇಶದಲ್ಲಿ ಶಾಂತಿ ಕಾಪಾಡುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ

ಭಟ್ಕಳ, ಡಿ. 6: ಮೌಲ್ಯಧಾರಿತ ರಾಜಕಾರಣದ ಗುರಿಯೊಂದಿಗೆ ದೇಶದಲ್ಲಿ ಸಕ್ರೀಯವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಭಟ್ಕಳ ಘಟಕವು ಗುರುವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಅರ್ಪಿಸಿ ಮುಂಬರುವ ದಿನಗಳಲ್ಲಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿಕೊಂಡಿದೆ.
ಬಾಬರಿ ಮಸೀದಿ ದ್ವಂಸಗೊಂಡ 26ನೇ ವರ್ಷದ ಅಂಗವಾಗಿ, ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ದೇಶದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವ ಕಿಡಿಗೇಡಿಗಳ ಮೇಲೆ ಹದ್ದಿನಕಣ್ಣನ್ನು ಇಡುವುದರ ಮೂಲಕ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಕ್ರಮ ಜರಗಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿರುವ ವೆಲ್ಫೇರ್ ಪಾರ್ಟಿ, ಮುಂಬರುವ ಚುನಾವಣೆಗಳನ್ನು ರಾಜಕೀಯ ಪಕ್ಷಗಳು ದುರುಪಯೋಗ ಮಾಡಿಕೊಂಡು ಜನರನ್ನು ದಾರಿ ತಪ್ಪಿಸುವುದರ ಮೂಲಕ ದೇಶದಲ್ಲಿ ಅಶಾಂತಿಗೆ ಕಾರಣರಾಗಬಹುದು. ಇಂತಹ ರಾಜಕೀಯ ಪಕ್ಷಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವಂತಾಗಲು ಚುನಾವಣ ಆಯೋಗಕ್ಕೆ ಸೂಚಿಸಬೇಕೆಂದು ಮನವಿಯಲ್ಲಿ ತಿಳಿಸಿದೆ.
ಅಯೋಧ್ಯ ವಿವಾದಿತ ಜಾಗದಲ್ಲಿ ಸ್ಥಿತಿಯನ್ನು ಹದಗಡೆದಂತೆ ನೋಡಿಕೊಳ್ಳಬೇಕೆಂದು ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿದೆ.
ಈ ಸಂದರ್ಭದಲ್ಲಿ ವೆಲ್ಪೇರ್ ಪಾರ್ಟಿಯ ಉತ್ತರಕನ್ನಡ ಜಿಲ್ಲಾಧ್ಯಾಕ್ಷ ಅಬ್ದುಲ್ ಜಬ್ಬಾರ್ ಅಸದಿ, ಉಪಾಧ್ಯಕ್ಷ ನಸೀಂ ಖಾನ್, ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಕಾರ್ಯದರ್ಶಿ ಸಫ್ವಾನ್, ಖಜಾಂಚಿ ಅಬ್ದುಲ್ ಮಜೀದ್ ಕೋಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.