ಫೈಝಲ್ ನಗರ: ಮೀಲಾದುನ್ನಬಿ, ಮಕ್ಕಳ ಪ್ರತಿಭೋತ್ಸವ

ಮಂಗಳೂರು, ಡಿ.6: ಮೀಲಾದುನ್ನಬಿಯ ಅಂಗವಾಗಿ ಗೌಸಿಯಾ ಜುಮಾ ಮಸ್ಜಿದ್ ಮತ್ತು ನಮಾವುಲ್ ಇಸ್ಲಾಮ್ ಮದ್ರಸ ಫೈಝಲ್ ನಗರ ಇದರ ವತಿಯಿಂದ ಮಕ್ಕಳ ಪ್ರತಿಭೋತ್ಸವವು ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಭಾಷಣ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಗೌಸಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬ್ದುಲ್ ನಾಸಿರ್ ಎನ್‌ಎಸ್‌ಆರ್, ಉಪಾಧ್ಯಕ್ಷ ಮುಹಮ್ಮದ್ ಎಂ.ಎಚ್., ಖತೀಬ್ ಸ್ವದಖತುಲ್ಲಾ ಅಝ್ಹರಿ, ಮದ್ರಸದ ಅಧ್ಯಾಪಕ ರಫೀಕ್ ಅಮ್ಜದಿ, ಮಾಜಿ ಅಧ್ಯಕ್ಷ ಮುಹಮ್ಮದ್ ರಫೀಕ್ ಎಂ.ಆರ್., ಬಜಾಲ್ ನಂತೂರ್ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಹಾಗೂ ಕಾರ್ಪೊರೇಟ್ ಅಬ್ದುಲ್ ರವೂಫ್, ಖತೀಬ್ ಇಲ್ಯಾಸ್ ಅಮ್ಜದಿ, ಅಶ್ರಫ್ ಕರಿಬೊಟ್ಟು ಉಪಸ್ಥಿತರಿದ್ದರು.
ಗೌಸಿಯಾ ಜುಮಾ ಮಸ್ಜಿದ್ ಪರಿಸರದ ಸ್ವಚ್ಛತೆಯ ಕಾಳಜಿ ವಹಿಸುತ್ತಾ, ಮುಸ್ಲಿಮರ ನಡುವೆ ಅನ್ಯೋನ್ಯವಾಗಿರುವ ಪ್ರಜ್ವಲ್ ಅಣ್ಣು ಅವರನ್ನು ಕೋಮು ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಸ್ಜಿದ್ ಮತ್ತು ಮದ್ರಸ ಆಡಳಿತ ಕಮಿಟಿಯ ವತಿಯಿಂದ ಸನ್ಮಾನಿಸಲಾಯಿತು.
Next Story