ಜಿಲ್ಲಾ ಮಟ್ಟದ ಕ್ರೀಡಾಕೂಟ: ಅಲ್-ಫುರ್ಖಾನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಮೂಡುಬಿದಿರೆ, ಡಿ.5: ಎಐಸಿಎಸ್ ಪ್ರಾಯೋಜಕತ್ವದಲ್ಲಿ ಉಜಿರೆಯ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತಿಗೆಯ ಅಲ್-ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ ಹಲವು ಪ್ರಶಸ್ತಿಗಳೊಂದಿಗೆ ಉತ್ತಮ ಸಾಧನೆ ಮೆರೆದಿದೆ.
ಹಿರಿಯ ವಿಭಾಗ: ಮುಹಮ್ಮದ್ ಜಾಫರ್ ಸಾದಿಕ್ 100 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ಮುಹಮ್ಮದ್ ಅರ್ಮಾನ್ 800 ಮೀ. ಓಟದಲ್ಲಿ ಪ್ರಥಮ, ಝುವೈರ್ ಅಹ್ಮದ್ ಗುಂಡೆಸತದಲ್ಲಿ ತೃತೀಯ ಸ್ಥಾನ ಮತ್ತು ಮುನೀಫ್ ಅಯ್ಯೂಬ್ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಕಿರಿಯ ವಿಭಾಗ: ಅಝ್‌ಫರ್ ಹುಸೈನ್ ಗುಂಡೆಸತದಲ್ಲಿ ದ್ವಿತೀಯ, ಮುಹಮ್ಮದ್ ನಿಶಾಮ್ ಎತ್ತರ ಜಿಗಿತದಲ್ಲಿ ತೃತೀಯ, ಶೀಶ್ ಅಬ್ದುಲ್ ಖಾದರ್ 200 ಮೀ. ಓಟದಲ್ಲಿ 3ತ ಎಐಸಿಎಸ್ ಪ್ರಾಯೋಜಕತ್ವದಲ್ಲಿ ಉಜಿರೆಯ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಗಳಿಸಿದ್ದಾರೆ.
ಅಲ್ಲದೆ, ಕ್ರೀಡಾಕೂಟದಲ್ಲಿ ಮುಹಮ್ಮದ್ ಜಾಫರ್ ಸಾದಿಕ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.