ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಸೈನಿಕ ಶಂಕಿತ ಆರೋಪಿ
ಸುಬೋಧ್ ಕುಮಾರ್
ಬುಲಂದ್ ಶಹರ್, ಡಿ.7: ಗೋಹತ್ಯೆ ಆರೋಪದಲ್ಲಿ ನಡೆದ ಹಿಂಸಾಚಾರದ ಸಂದರ್ಭ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಸೈನಿಕನೊಬ್ಬ ಶಂಕಿತ ಆರೋಪಿಯಾಗಿದ್ದಾನೆ ಎಂದು ವರದಿಯಾಗಿದೆ.
ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಾವಿಗೆ ಕಾರಣವಾದ ಗುಂಡನ್ನು ಸೈನಿಕ ಜೀತು ಫೌಜಿ ಸಿಡಿಸಿರಬೇಕು ಎಂದು ಶಂಕಿಸಲಾಗಿದೆ. ಬುಲಂದ್ ಶಹರ್ ನಲ್ಲಿ ನಡೆದ ಹಿಂಸಾಚಾರದ ಹಲವು ವಿಡಿಯೋಗಳಲ್ಲಿ ಈತನಿದ್ದು, ಇಂದು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಯ ನಂತರ ಫೌಜಿ ಜಮ್ಮು ಕಾಶ್ಮೀರಕ್ಕೆ ಪರಾರಿಯಾಗಿದ್ದಾನೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
Next Story