ಚೆನ್ನೈತ್ತೋಡಿ ಸರಕಾರಿ ಶಾಲೆಯ ಶತಮಾನೋತ್ಸವ: ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ, ಡಿ. 7: ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಡಿ.22ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಸಿ.ಎ.ಬ್ಯಾಂಕ್ ಸಿದ್ದಕಟ್ಟೆಯ ಸಿಇಒ ಶೀನ ಶೆಟ್ಟಿ ಶುಕ್ರವಾರ ಬಿಡುಗಡೆಗೊಳಿಸಿದರು.
ಸರ್ವರ ಸಹಕಾರದೊಂದಿಗೆ ಶಾಲಾ ಶತಮಾನೋತ್ಸವವು ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿದೆ. ಈ ನಿಟ್ಟಿನಲ್ಲಿ ವಿದ್ಯಾಭಿಮಾನಿಗಳೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಎ.ಬಸ್ತಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಎ.ಗೋಪಾಲ ಅಂಚನ್ ಶತಮಾನೋತ್ಸವದಲ್ಲಿ ಜವಾಬ್ದಾರಿ- ಸಿದ್ಧತೆ-ಸಂಘಟನೆ ಬಗ್ಗೆ ಮಾಹಿತಿ ನೀಡಿದರು.
ಮಕ್ಕಳ ಪ್ರತಿಭಾ ಪುರಸ್ಕಾರ, ಸಾಂಸ್ಕತಿಕ ವೈಭವ, ನಾಟಕ, ಯಕ್ಷಗಾನ, ನೂತನ ಭೋಜನ ಶಾಲೆಯ ಉದ್ಘಾಟನೆ, ಗುರುವಂದನೆ, ಸಾಧಕರಿಗೆ ಸನ್ಮಾನ, ಪುಸ್ತಕ ಮತ್ತು ವಸ್ತುಗಳ ಪ್ರದರ್ಶನ ಸಹಿತ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶತಮಾನೋತ್ಸವ ಸಂಭ್ರಮವನ್ನು ಮಾದರಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಚೆನ್ನೈತ್ತೋಡಿ ಗ್ರಾಪಂ ಅಧ್ಯಕ್ಷ ಯತೀಶ್ ಎಂ. ಶೆಟ್ಟಿ, ಮಾಜಿ ಅಧ್ಯಕ್ಷರಾದ ಶ್ರೀಧರ ಜಿ. ಪೈ, ನವೀನ್‌ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಜಾನೆಟ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಪ್ರಮೀಳ, ಶತಮಾನೋತ್ಸವ ಸಮಿತಿಯ ಸಂಚಾಲಕ ನಾರಾಯಣ ಶೆಟ್ಟಿ ಪರಾರಿ, ಪ್ರಧಾನ ಕಾರ್ಯದರ್ಶಿ ಡೆನಿಸ್ ಫೆರ್ನಾಂಡಿಸ್, ಸಮಿತಿ ಪ್ರಮುಖರಾದ ಅಮ್ಮು ರೈ ಹರ್ಕಾಡಿ, ಸಿ.ಅನಂತ ಪೈ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಚಂದ್ರಶೇಖರ ಶೆಟ್ಟಿ, ಪ್ರಕಾಶ್ ಗಟ್ಟಿ, ಸತೀಶ್ ಅಂತರಗುತ್ತು, ಸತೀಶ್ ಮಾದೆರೊಟ್ಟು, ಅರುಣ್ ಕುಮಾರ್ ಇಂದ್ರ, ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.
ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.