ದಕ್ಷಿಣ ವಲಯ ಅಂತರ ವಿವಿ ಚೆಸ್ ಚಾಂಪಿಯನ್‌ಷಿಪ್ : ಮದ್ರಾಸ್ ವಿವಿ ಚಾಂಪಿಯನ್

ಮಣಿಪಾಲ, ಡಿ.7: ಮಣಿಪಾಲ, ಡಿ.7: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಕೆಎಂಸಿಯ ಡಾ.ಟಿಎಂಎ ಪೈ ಸಾಂಗಣದಲ್ಲಿಇಂದುಮುಕ್ತಾಯಗೊಂಡನಾಲ್ಕುದಿನಗಳದಕ್ಷಿಣವಲಯಅಂತರವಿವಿಪುರುಷರಚೆಸ್‌ಚಾಂಪಿಯನ್‌ಷಿಪ್‌ನಲ್ಲಿಚೆನ್ನೆನ ಮದ್ರಾಸ್ ವಿವಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ಮದ್ರಾಸ್ ವಿವಿ, ಇಂದು ನಡೆದ ಏಳನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಮಂಗಳೂರು ವಿವಿಯನ್ನು ಪರಾಭವಗೊಳಿಸುವ ಮೂಲಕ ಒಟ್ಟು 14 ಅಂಕಗಳನ್ನು ಸಂಗ್ರಹಿಸಿ ಸ್ಪರ್ಧಾಕೂಟದ ಅಗ್ರಸ್ಥಾನಿಯಾಯಿತು.
ಕಳೆದ ವರ್ಷದ ಚಾಂಪಿಯನ್ ಆಗಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿದ್ದ ಚೆನ್ನೈನ ಅಣ್ಣಾ ವಿವಿ 11 ಅಂಕಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನದೊಂದಿಗೆ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು. ಟೂರ್ನಿಯ ಅಗ್ರಸೀಡ್ ಆಗಿದ್ದ ಹೈದರಾಬಾದ್‌ನ ಉಸ್ಮಾನಿಯಾ ವಿವಿ ಸಹ 11 ಅಂಕಗಳನ್ನು ಗಳಿಸಿದ್ದು, ಟ್ರೈ ಬ್ರೇಕರ್‌ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.
ಏಳು ಸುತ್ತಿನ ಸ್ಪರ್ಧೆಗಳ ಕೊನೆಗೆ ಒಟ್ಟು 11 ಅಂಕಗಳನ್ನು ಸಂಗ್ರಹಿಸಿದ ಇನ್ನೆರಡು ತಂಡಗಳಾದ ಸುರತ್ಕಲ್‌ನ ಎನ್‌ಐಟಿಕೆ ಹಾಗೂ ಎಸ್‌ಆರ್‌ಎಂ ವಿವಿ ನಡುವೆ ನಾಲ್ಕನೇ ಸ್ಥಾನಕ್ಕೆ ಸ್ಪರ್ಧೆ ನಡೆದು ಒಟ್ಟಾರೆಯಾಗಿ ಅರ್ಧ ಅಂಕಗಳ ಮುನ್ನಡೆಯೊಂದಿಗೆ ಎನ್‌ಐಟಿಕೆ ಸುರತ್ಕಲ್ ನಾಲ್ಕನೇ ಹಾಗೂ ಎಸ್‌ಆರ್‌ಎಂ ಐದನೇ ಸ್ಥಾನ ಪಡೆದವು.ಮಂಗಳೂರು ವಿವಿ ಒಟ್ಟು 10 ಅಂಕಗಳನ್ನು ಪಡೆದಿದ್ದು ಕೂಟದಲ್ಲಿ 9ನೇ ಸ್ಥಾನದೊಂದಿಗೆ ಸ್ಪರ್ಧೆಯನ್ನು ಮುಗಿಸಿತು.
ಇದರೊಂದಿಗೆ ಚಾಂಪಿಯನ್ ಮದ್ರಾಸ್ ವಿವಿ, ರನ್ನರ್‌ಅಪ್ ಅಣ್ಣಾ ವಿವಿ, ಉಸ್ಮಾನಿಯಾ ವಿವಿ ಹಾಗೂ ಎನ್‌ಐಟಿಕೆ ಸುರತ್ಕಲ್ ತಂಡಗಳು ಡಿಸೆಂಬರ್ ಮೂರನೇ ವಾರದಿಂದ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆಯುವ ಅಖಿಲ ಭಾರತ ಅಂತರ ವಿವಿ ಚೆಸ್ ಟೂರ್ನಿಯಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿ ಸುವ ಅರ್ಹತೆಯನ್ನು ಪಡೆದುಕೊಂಡವು.
ಇಂದು ನಡೆದ ಕೊನೆಯ ಸುತ್ತಿನ ಸ್ಪರ್ಧೆಗಳಲ್ಲಿ ಅಣ್ಣಾ ವಿವಿ (11), ಎಸ್‌ಆರ್‌ಎಂ ವಿವಿ (11)ಯೊಂದಿಗೆ ಡ್ರಾ ಸಾದಿಸಿದರೆ, ಉಸ್ಮಾನಿಯಾ ವಿವಿ, ವಿಐಟಿ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ವಿವಿ (9)ಯನ್ನು ಪರಾಭವಗೊ ಳಿಸಿತು. ಎನ್‌ಐಟಿಕೆ ಸುರತ್ಕಲ್ (11), ಆಂದ್ರ ವಿವಿ (9)ಯನ್ನು ಪರಾಭವ ಗೊಳಿಸಿತು. ಆತಿಥೇಯ ಮಾಹೆ ಒಟ್ಟು 7 ಅಂಕ ಸಂಗ್ರಹಿಸಿದ್ದು, 27ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಕೊನೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಮಾಹೆಯ ಜಂಟಿ ಕ್ರೀಡಾ ಕಾರ್ಯದರ್ಶಿ ಡಾ.ಶೋಭಾ ಎಂ.ಎ., ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಧರ್ ಎಚ್. ಉಪಸ್ಥಿತರಿದ್ದರು.