ಡಿ.9ರಂದು ಶರೀಹತ್ ಸಂರಕ್ಷಣಾ ಸಮ್ಮೇಳನ: ಸೂರತ್ಕಲ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು, ಡಿ. 7: ಮಂಗಳೂರಿನಲ್ಲಿ ಡಿ.9ರಂದು ನಡೆಯಲಿರುವ ಶರೀಹತ್ ಸಂರಕ್ಷಣಾ ಸಮ್ಮೇಳನದ ಪ್ರಚಾರದ ಪ್ರಯುಕ್ತ ಇಂದು ಸೂರತ್ಕಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್, ಮೇನೇಜ್ಮೆಂಟ್, ಎಸ್ಕೆಸ್ಸೆಸ್ಸೆಫ್ ವಿಖಾಯ ವಿಂಗ್ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸೂರತ್ಕಲ್ ಸರಕಾರಿ ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸೂರತ್ಕಲ್ ರೇಂಜ್ ಮೇನೇಜ್ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲಾ ದಾರಿಮಿ ಬೈತಡ್ಕ, ಇಮ್ತಿಯಾಝ್ ಹನೀಫ್ ಇಡ್ಯಾ, ಡಾ. ದಿನೇಶ್, ಡಾ. ರೋಷನ್, ಕಾರ್ಯದರ್ಶಿ ಹನೀಫ್ ದಾರಿಮಿ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು.
Next Story