ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಎಸ್ಪಿಲಕ್ಷ್ಮಣ್ ನಿಂಬರ್ಗಿ

ಉಡುಪಿ, ಡಿ.7: ಅಂಬೇಡ್ಕರ್ ಪ್ರಪಂಚದಲ್ಲೇ ಶ್ರೇಷ್ಠ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ವಿವಿಧ ಭಾಷೆ, ಧರ್ಮ, ಜಾತಿ, ಸಂಸ್ಕೃತಿಯವರಿರುವರ ಈ ದೇಶದಲ್ಲಿ ಎಲ್ಲರನ್ನೂ ಒಟ್ಟಾಗಿ ಹೋಗುವುದೆ ಈ ಸಂವಿಧಾನದ ವೈಶಿಷ್ಟ್ಯ ವಾಗಿದೆ. ಈ ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟದ ವತಿ ಯಿಂದ ಬಾಬಾಸಾಹೇಬ್ ಅಂಬೇಡ್ಕರ್‌ರವರ 62ನೇ ಪರಿನಿಬ್ಬಾಣ ದಿನದ ಪ್ರಯುಕ್ತ ಶುಕ್ರವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸ ಲಾದ ಸಂವಿಧಾನ ಸಂರಕ್ಷಣಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತವು ಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಾಗ 500ಕ್ಕೂ ಅಧಿಕ ಸಾಮಂತ ರಾಜರಿದ್ದರು. ಅವರನ್ನೆಲ್ಲಾ ಈ ಭಾರತದ ಪ್ರಜಾಪ್ರಭುತ್ವದ ಒಳಗೆ ತರುವುದು ದೊಡ್ಡ ಸವಾಲೇ ಆಗಿತ್ತು. ಈ ಸಾಮಂತ ರಾಜರನ್ನು ಪ್ರಜಾ ಪ್ರಭುತ್ವದ ಒಳಗಡೆ ತರುವ ಕೆಲಸವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಮಾಡಿದರು. ಈ ಪ್ರಜಾಪ್ರಭುತ್ವದ ಒಳಗಡೆ ನೂರಾರು ವಿವಿಧ ಸಂಸ್ಥಾನದ ರಾಜರುಗಳನ್ನು ಒಂದೇ ಆಡಳಿತದ ಅಡಿಯಲ್ಲಿ ಸುದೀರ್ಘವಾಗಿ ಸಾಗಿಬರು ವಂತೆ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ದಸಂಸ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಸಂಸ ಭೀಮ ಘರ್ಜನೆಯ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಶ್ಯಾಮರಾಜ್ ಬಿರ್ತಿ, ದಲಿತ ಚಿಂತಕ ನಾರಾಯಣ ಮಣೂರು, ಬೌಧ್ಧ ಮಹಾಸಭಾದ ಅಧ್ಯಕ್ಷ ಶಂಭು ಮಾಸ್ತರ್, ಹಿರಿಯ ಚಿಂತಕರಾದ ಜಿ.ರಾಜಶೇಖರ್, ಪ್ರೊ.ಫಣಿರಾಜ್, ಜೈ ಭೀಮ್ ಆರ್ಮಿಯ ಪ್ರಕಾಶ್ ಹೇರೂರು, ಲೂವೀಸ್ ಲೋಬೋ, ದಸಂಸ ಮುಖಂಡರಾದ ಎಸ್.ಎಸ್.ಪ್ರಸಾದ್, ಚಂದ್ರ ಅಲ್ತಾರ್, ರವೀಂದ್ರ ಬಂಟ ಕಲ್ಲು, ಶಂಕರ್‌ದಾಸ್ ಚೆಂಡ್ಕಳ ಮೊದಲಾದವರು ಉಪಸ್ಥಿತರಿದ್ದರು.