ನಿರಂತರ್ ಕೊಂಕಣಿ ನಾಟಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ, ಡಿ.7: ಉದ್ಯಾವರ ನಿರಂತರ್ ಸಂಸ್ಥೆಯ ಆಶ್ರಯದಲ್ಲಿ ಜ.18, 19 ಮತ್ತು 20ರಂದು ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾ ಲಯದ ವಠಾರದಲ್ಲಿ ನಡೆಯಲಿರುವ ನಿರಂತರ್ ಕೊಂಕಣಿ ನಾಟಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾ ಲಯದ ಸಹಾಯಕ ಧರ್ಮಗುರು ರೆ.ಫಾ.ರಾಲ್ವಿನ್ ಅರಾನ್ನ ಮತ್ತು ಪಲಿ ಮಾರು ದೇವಾಲಯದ ಧರ್ಮಗುರು ರೆ.ಫಾ.ಡಾ.ರೋಕ್ ಡಿಸೋಜ ಇಂದು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ರೆ.ಫಾ.ರೆಜಿನಾಲ್ಡ್ ಪಿಂಟೊ, ಉದ್ಯಾವರ ಸಂತ ಫ್ರಾನ್ಸಿಸ್ ಜೆವಿಯರ್ ದೇವಾಲಯದ ಉಪಾಧ್ಯಕ್ಷ ಮೆಲ್ವಿನ್ ನೊರೊನ್ನ, ನಿರಂತರ್ ಅಧ್ಯಕ್ಷ ಸ್ಟೀವನ್ ಕುಲಾಸೊ, ಸಾಂಸ್ಕೃತಿಕ ಕಾರ್ಯದರ್ಶಿ ಜೂಲಿಯಾ ಡಿಸೋಜ, ಡಿಯಾಕೊನ್ ಸ್ಟೀವನ್ ಫೆರ್ನಾಂಡಿಸ್, ನಾಟಕೋತ್ಸವದ ಸಂಚಾಲಕ ರೊನಾಲ್ಡ್ ಡಿಸೋಜ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೈಕಲ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
Next Story