ಎಸ್ಸೆಸ್ಸೆಫ್ ಅಡ್ಯಾರ್ ಪದವು ಅಧ್ಯಕ್ಷರಾಗಿ ನವಾಝ್ ಸಖಾಫಿ ಆಯ್ಕೆ

ಮಂಗಳೂರು, ಡಿ.8: ಎಸ್ಸೆಸ್ಸೆಫ್ ಅಡ್ಯಾರ್ ಪದವು ಶಾಖೆಯ 2018-19ನೇ ಸಾಲಿನ ಮಹಾಸಭೆ ಡಿ.6ರಂದು ಎಸ್ಸೆಸ್ಸೆಫ್ ಕಚೇರಿಯಲ್ಲಿ ಆಸಿಫ್ ಸಅದಿ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ವೈ.ಎಸ್. ಕಾರ್ಯದರ್ಶಿ ಎಂ.ಕೆ.ಬದ್ರುದ್ದೀನ್ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಕೋಶಾಧಿಕಾರಿ ನವಾಝ್ ಸಖಾಫಿ ಅಡ್ಯಾರ್ ಪದವು ಸಂಘಟನೆ ತರಬೇತಿ ನಡೆಸಿದರು. ವೀಕ್ಷಕರಾಗಿ ಸುಹೈಲ್ ಫರಂಗಿಪೇಟೆ, ಫಯಾಝ್ ಕೊಪ್ಪಳ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸೈಯದ್ ಇಸ್ಹಾಖ್ ತಂಙಳ್, ಜಬ್ಬಾರ್ ಕಣ್ಣೂರು, ಎಸ್.ವೈ.ಎಸ್. ಬ್ರಾಂಚ್ ಅಧ್ಯಕ್ಷ ಸಲೀಂ ಬಿ.ಎ ಮಾತನಾಡಿ ಶುಭ ಹಾರೈಸಿದರು.
ಇದೇ ಸಂದರ್ಭ 2018 - 2019 ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನವಾಝ್ ಸಖಾಫಿ ಎ.ಕೆ., ಪ್ರ. ಕಾರ್ಯದರ್ಶಿಯಾಗಿ ಕಬೀರ್, ಕೋಶಾಧಿಕಾರಿಯಾಗಿ ಮುಫೀದ್, ಉಪಾಧ್ಯಕ್ಷರಾಗಿ ಇರ್ಷಾದ್ ಮದನಿ, ಫೈಝಲ್, ಜೊತೆ ಕಾರ್ಯದರ್ಶಿಗಳಾಗಿ ನೌಶಾದ್, ಆಸಿಫ್ ದಾಮಸ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಫ್ವಾನ್ ಬಿ.ಎ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೌಶಾದ್ ಮದನಿ, ಆಸಿಫ್ ಸಅದಿ, ರಿಯಾಝ್ ಬಿತ್ತ್ ಪಾದೆ, ನವಾಝ್, ಮುಝಮ್ಮಿಲ್, ಸ್ವಾದಿಖ್, ಜುನೈದ್, ಫಾರೂಖ್, ರಮೀಝ್, ಸೆಕ್ಟರ್ ಕೌನ್ಸಿಲರ್ ಗಳಾಗಿ ನವಾಝ್ ಸಖಾಫಿ ಎ.ಕೆ., ಸಫ್ವಾನ್ ಬಿ.ಎ., ಮುಫೀದ್, ಆಸಿಫ್ ಸಅದಿ, ನೌಶಾದ್ ಮದನಿ, ಇರ್ಷಾದ್ ಮದನಿ, ಫೈಝಲ್, ನೌಶಾದ್, ಆಸಿಫ್, ಕಬೀರ್, ರಿಯಾಝ್, ನವಾಝ್, ಮುಝಮ್ಮಿಲ್, ಜುನೈದ್, ಫಾರೂಖ್, ರಮೀಝ್, ಬಾಸಿತ್, ಅಝೀಂ, ಸಫ್ವಾನ್, ಮುಬೀರ್ ಮುಂತಾದವರು ಆಯ್ಕೆಯಾದರು.