ಡಿ.9ರಂದು 'ಕುಂಚ ಕಹಳೆ': ಪರಿಸರ ಜಾಗೃತಿ ಕಲಾ ಶಿಬಿರ
ಮಂಗಳೂರು, ಡಿ.8: ಪರಿಸರ ಸಂರಕ್ಷಣೆ ಬಗ್ಗೆ ನಾಗರಿಕರ ಗಮನ ಸೆಳೆಯುವ ಉದ್ದೇಶದಿಂದ ಕರಾವಳಿ ಚಿತ್ರಕಲಾ ಚಾವಡಿ(ರಿ) ಮಂಗಳೂರು ತಂಡ ಮತ್ತು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯು ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಸಹಯೋಗದಲ್ಲಿ ಡಿ.9ರಂದು ಪರಿಸರ ಜಾಗೃತಿ ಕಲಾ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ರಿಂದ ಅಪರಾಹ್ನ 3ರ ಕದ್ರಿ ಪಾರ್ಕಿನಲ್ಲಿ ತನಕ ನಡೆಯು ಶಿಬಿರದಲ್ಲಿ ಕರಾವಳಿ ಚಿತ್ರಕಲಾ ಚಾವಡಿ ತಂಡದ ಸದಸ್ಯರು ಸಾರ್ವಜನಿಕವಾಗಿ ಚಿತ್ರ ರಚಿಸುವರು. ಅಲ್ಲದೆ, ಸ್ಥಳೀಯ ಕಾಲೇಜುಗಳ ಉತ್ಸಾಹಿ ವಿದ್ಯಾರ್ಥಿಗಳು ಅದೇ ವಿಷಯದ ಕುರಿತಂತೆ ಚಿತ್ರರಚನಾ ಸ್ಪರ್ಧೆಯಲ್ಲಿ ಭಾಗವಹಿಸುವರು.
1984ರಲ್ಲಿ ಭೋಪಾಲದಲ್ಲಿ ಸಂಭವಿಸಿದ ಭೀಕರ ಕೈಗಾರಿಕಾ ದುರಂತಕ್ಕೆ ಬಲಿಯಾದವರ ನೆನಪಿನಲ್ಲಿ ಹಾಗೂ ನಗರದ ಜನತೆಯನ್ನು ನಮ್ಮ ಮುಂದಿರುವ ವಿಪತ್ತುಗಳ ಬಗ್ಗೆ ಎಚ್ಚರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story