ಕೊಡಾಜೆ: ಮನೆಯ ಕಿಟಕಿ ರಾಡ್ ಮುರಿದು ಸಾವಿರಾರು ರೂ. ಕಳವು

ಬಂಟ್ವಾಳ, ಡಿ.8: ಮನೆಯ ಹಿಂಭಾಗದ ಕಿಟಕಿಯ ರಾಡ್ ಮುರಿದು ಒಳನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಕಳವುಗೈದ ಘಟನೆ ಮಾಣಿ ಸಮೀಪದ ಕೊಡಾಜೆಯಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಕೊಡಾಜೆ ಮಸೀದಿ ಸಮೀಪದ ಎಸ್.ಎಂ.ಎಸ್.ಇಸ್ಮಾಯೀಲ್ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಯಲ್ಲಿರುವ ಸುಲೈಮಾನ್ ಎಂಬವರಿಗೆ ಸೇರಿದ ನಗದು ಕಳವಾಗಿದೆ ಎಂದು ತಿಳಿದುಬಂದಿದೆ.
ಸುಲೈಮಾನ್ ಕುಟುಂಬ ಸಹಿತ ನಿನ್ನೆ ಸಂಬಂಧಿಕರ ಮನೆಗೆ ತೆರಳಿದ್ದರು ಎನ್ನಲಾಗಿದ್ದು, ಇಂದು ಬೆಳಗ್ಗೆ ಮನೆಮಂದಿ ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಕಪಾಟುಗಳನ್ನು ಜಾಲಾಡಿದ್ದು, ಪವಿತ್ರ ಉಮ್ರಾ ಯಾತ್ರೆಗೆ ತೆರಳಲು ಇರಿಸಿದ್ದ ಸುಮಾರು 45 ಸಾವಿರ ರೂ. ಕಳವು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಂಟ್ವಾಳ ಪೊಲೀಸರು ಹಾಗೂ ಶ್ವಾನದಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೋಲನೆ ನಡೆಸುತ್ತಿದ್ದಾರೆ.
ಇದೇ ಮನೆಯಲ್ಲಿ ಕಳ್ಳರು ಮೂರನೇ ಬಾರಿ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Next Story