ಸ್ವಯಂ ರಕ್ಷಣೆಗಾಗಿ ಸಂಚಾರಿ ನಿಯಮ ಪಾಲಿಸಿ: ಎಸ್ಸೈ ಅಬ್ದುಲ್ ಖಾದರ್

ಶಿರ್ವ, ಡಿ.8: ಮಿತಿಮೀರಿದ ವೇಗ, ಚಾಲಕನ ನಿರ್ಲಕ್ಷ, ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು ಸೇರಿ ದಂತೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದರಿಂದ ಪ್ರತಿನಿತ್ಯ ರಸ್ತೆ ಅಪಘಾತಗಳು ನಡೆಯುತ್ತವೆ. ಪೊಲೀಸರಿಗೆ ಹೆದರಿ ನಿಯಮ ಪಾಲಿಸದೆ, ಸ್ವಯಂ ರಕ್ಷಣೆಗಾಗಿ ನಿಯಮಗಳನ್ನು ಪಾಲಿಸಿ ಜೀವವನ್ನು ಉಳಿಸಿಕೊಳ್ಳಬೇಕು ಎಂದು ಶಿರ್ವ ಪೋಲಿಸ್ ಠಾಣಾ ಧಿಕಾರಿ ಅಬ್ದುಲ್ ಖಾದರ್ ಹೇಳಿದ್ದಾರೆ.
ಶಿರ್ವ ಪೋಲಿಸ್ ಠಾಣೆ, ಬಂಟಕಲ್ಲು ರಿಕ್ಷಾ, ಕಾರು, ಚಾಲಕ ಮಾಲಕರ ಸಂಘ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಬಂಟಕಲ್ಲು ಬಸ್ ನಿಲ್ದಾಣದ ಬಳಿ ಗುರುವಾರ ಆಯೋಜಿಸಲಾದ ಅಪರಾಧ ತಡೆ ಮಾಸಾ ಚರಣೆ, ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಹಾಗೂ ಬೀದಿ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ದಲ್ಲಿ ರಸ್ತೆ ಸುರಕ್ಷಾ ಮಾಹಿತಿ ಕರಪತ್ರ ಬಿಡುಗಡೆ, ಸಂತ ಮೇರಿ ಕಾಲೇಜಿನ ಸಮಾಜ ಸಮಾಜ ಕಾರ್ಯ ವಿಬಾಗದ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನಗೊಂಡಿತು. ಅಧ್ಯಕ್ಷತೆಯನ್ನು ಗ್ರಾಪಂ ಸಸ್ಯ ಕೆ.ಆರ್. ಪಾಟ್ಕರ್ ವಹಿಸಿದ್ದರು.
ಶಿರ್ವ ಗ್ರಾಪಂ ಸದಸ್ಯೆ ವಾಲೆಟ್ ಕೆಸ್ತಲಿನೊ, ಸಂತ ಮೇರಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಆಚಾರ್ಯ, ಬಂಟಕಲ್ಲು ರಿಕ್ಷಾ ಚಾಲಕ ಮಾಲಕರ ಸಂಘದ ಅದ್ಯಕ್ಷ ರಾಘವೇಂದ್ರ, ಕಾರು ಚಾಲಕ ಮಾಲಕರ ಸಂದ ಅಧ್ಯಕ್ಷ ದಿನೇಶ್ ಅರಸೀಕಟ್ಟೆ, ಬಿ.ಸಿ.ರೋಡ್ ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಡೇನಿಸ್ ಉಪಸ್ಥಿತರಿದ್ದರು. ಹರೀಶ್ ಹೇರೂರು ವಂದಿಸಿದರು. ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.







