ಸಲಿಂಗಿಗಳಿಗೆ ವಿದ್ಯುತ್ ಶಾಕ್ ನೀಡುತ್ತಿದ್ದ ವೈದ್ಯನಿಗೆ ನ್ಯಾಯಾಲಯ ಸಮನ್ಸ್
ಹೊಸದಿಲ್ಲಿ,ಡಿ.8: ಸಲಿಂಗಕಾಮವನ್ನು ಒಂದು ಅನುವಂಶೀಯ ಮಾನಸಿಕ ಸಮಸ್ಯೆಯಾಗಿದೆ ಎಂದು ವ್ಯಾಖ್ಯಾನಿಸಿದ್ದ ವೈದ್ಯರೊಬ್ಬರು ಸಲಿಂಗಿಗಳಿಗೆ ವಿದ್ಯುತ್ ಶಾಕ್ ಚಿಕಿತ್ಸೆ ನೀಡುತ್ತಿದ್ದುದರ ವಿರುದ್ಧ ದಿಲ್ಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಡಾ.ಪಿ.ಕೆ ಗುಪ್ತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಅವರನ್ನು ದಿಲ್ಲಿ ವೈದ್ಯಕೀಯ ಮಂಡಳಿ (ಡಿಎಂಸಿ) ವಜಾಗೊಳಿಸಿದೆ.
ವೈದ್ಯರು ಸಲಿಂಗಿಗಳ ಮೇಲೆ ಹಾರ್ಮೊನ್ ಮತ್ತು ಶಾಕ್ ಚಿಕಿತ್ಸೆಯನ್ನು ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಂಸಿ ನೀಡಿದ ದೂರಿನ ವಿಚಾರಣೆಯನ್ನು ನಡೆಸಿದ ನಂತರ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ. ಗುಪ್ತಾರನ್ನು ಮಂಡಳಿಯು 2016ರಲ್ಲಿ ವೈದ್ಯ ವೃತ್ತಿಯಿಂದ ವಜಾಗೊಳಿಸಿತ್ತು. ಆದರೆ ಅವರು ಈಗಲೂ ತನ್ನನ್ನು ವೈದ್ಯರೆಂದು ಪ್ರತಿಪಾದಿಸುತ್ತಿದ್ದಾರೆ ಮತ್ತು ತನ್ನ ಅಸಂಪ್ರದಾಯಿಕ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ ಎಂದು ಮಂಡಳಿ ಆರೋಪಿಸಿದೆ.
ಆರೋಪಿ ವೈದ್ಯ ನೀಡುವ ಪರಿವರ್ತನಾ ಚಿಕಿತ್ಸೆಯನ್ನು ವೈದ್ಯಕೀಯ ವಿಜ್ಞಾನವಾಗಲೀ ಅಥವಾ ಕಾನೂನಾಗಲೀ ಅಂಗೀಕರಿಸಿಲ್ಲ ಎಂದು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಅಭಿಲಾಷ್ ಮಲ್ಹೋತ್ರಾ ತಿಳಿಸಿದ್ದಾರೆ.