ದೇವಳದ ಅರ್ಚಕರಿಗೆ ಹಲ್ಲೆ: ಖಂಡನೆ
ಉಡುಪಿ, ಡಿ. 8: ಕರ್ಜೆ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶೀಯ ಅರ್ಚಕರು ಮತ್ತು ಅವರ ಪುತ್ರನ ಮೇಲೆ ಗುರುವಾರ ದೇವಳದ ವಾರ್ಷಿಕ ದೀಪೋತ್ಸವದ ಸಂದರ್ಭದಲ್ಲಿ ದೇವಳದ ಆಡಳಿತಕ್ಕೆ ಸಂಬಂಧಿಸಿ ಹಲ್ಲೆ ನಡೆಸಿ, ಮಾನಹಾನಿ ಮಾಡಿರುವುದನ್ನು ಬ್ರಾಹ್ಮಣ ಯುವ ಮುಖಂಡ ವಾಸುದೇವ ಭಟ್ ಪೆರಂಪಳ್ಳಿ ಖಂಡಿಸಿದ್ದಾರೆ.
ಇತ್ತೀಚೆಗಷ್ಟೇ ಭಕ್ತರ ಸೇವೆಯಿಂದ ಭವ್ಯವಾಗಿ ನವೀಕರಣಗೊಂಡ ದೇವಳ ದಲ್ಲಿ ಈ ಬೆಳವಣಿಗೆ ನಿಜಕ್ಕೂ ವಿಷಾದನೀಯ. ಅಭಿಪ್ರಾಯ ಬೇಧಗಳೇನೇ ಇದ್ದರೂ ಮಾತುಕತೆಯ ಮೂಲಕ ಪರಿಹರಿಸಲು ಯತ್ನಿಸಬೇಕು ಅಥವಾ ನ್ಯಾಯಾಲಯದ ಮೂಲಕ ಪರಿಹರಿಸಲು ಯತ್ನಿಸಬಹುದೇ ಹೊರತು ಈ ರೀತಿ ಅರ್ಚಕರ ತೇಜೋವಧೆ ಸರಿಯಲ್ಲ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಪ್ಪಿತಸ್ಥರು ಸನ್ನಿಧಾನಕ್ಕೆ ಬಂದು ದೇವರಲ್ಲಿ ಮತ್ತು ಅರ್ಚಕರಲ್ಲಿ ಈ ಬಗ್ಗೆ ಬಹಿರಂಗ ಕ್ಷಮೆ ಯಾಚಿಬೇಕು ಎಂದವರು ಒತ್ತಾಯಿಸಿದ್ದಾರೆ.
Next Story