ದಾವಣಗೆರೆ: ಕೊಲೆ ಆರೋಪಿ ಬಂಧನ

ದಾವಣಗೆರೆ,ಡಿ.8: ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ಪತಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪ್ರಕರಣದ ತನಿಖೆ ನಡೆಸಿದ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ಮಾಬೂಷಾ (36) ಕೊಲೆ ಆರೋಪಿ. ಈತ ಚಂದ್ರಪ್ಪ ಎಂಬಾತನ ಪತ್ನಿಯೊಂದಿಗೆ ಅನೈತಿಕ ಸಂಬಂಧಹೊಂದಿದ್ದ. ತನ್ನ ಆಟಕ್ಕೆ ಚಂದ್ರಪ್ಪ ಅಡ್ಡಿಯಾಗಬಹುದೆಂದು ಕಳೆದ ಡಿ.3 ರಂದು ನಗರದ ಹೊರವಲಯದ ಬಸಾಪುರದಲ್ಲಿ ಚಂದ್ರಪ್ಪನನ್ನು ಕೊಲೆ ಮಾಡಿ ಹಳ್ಳದಲ್ಲಿ ಬಿಸಾಕಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ನಡೆಸಿದ ತನಿಖೆಯಿಂದ ಈ ರಹಸ್ಯ ಹೊರಬಂದಿದೆ. ಮಾಬೂಷನನ್ನು ಪೊಲೀಸರು ಬಂಧಿಸಿದ್ದಾರೆ. ಆರ್‍ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story





