ದಿನಕ್ಕೆ 12ಲಕ್ಷ ಬ್ಯಾರಲ್ ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ: ತೈಲ ಬೆಲೆ 4 ಶೇ. ಏರಿಕೆ

ನ್ಯೂಯಾರ್ಕ್, ಡಿ. 8: ಕುಸಿಯುತ್ತಿರುವ ತೈಲ ಬೆಲೆಯನ್ನು ನಿಯಂತಿಸುವುದಕ್ಕಾಗಿ ತೈಲ ಉತ್ಪಾದನೆಯನ್ನು ಕಡಿತ ಮಾಡಲು ಸೌದಿ ಅರೇಬಿಯ, ‘ಒಪೆಕ್’ನ ಇತರ ತೈಲ ಉತ್ಪಾದಕ ದೇಶಗಳು ಹಾಗೂ ರಶ್ಯ ಮುಂತಾದ ಇತರ ದೇಶಗಳು ಶುಕ್ರವಾರ ನಿರ್ಧರಿಸಿವೆ. ಅದರ ಬೆನ್ನಿಗೇ ತೈಲ ಬೆಲೆಯಲ್ಲಿ 4 ಶೇಕಡಕ್ಕೂ ಹೆಚ್ಚಿನ ಏರಿಕೆಯಾಯಿತು.
2019ರಿಂದ ತೈಲ ಉತ್ಪಾದನೆಯಲ್ಲಿ ದಿನಕ್ಕೆ 12 ಲಕ್ಷ ಬ್ಯಾರಲ್ ಕಡಿತ ಮಾಡಲು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ಅದರ ರಶ್ಯ ನೇತೃತ್ವದ ಮಿತ್ರದೇಶಗಳು ಒಪ್ಪಿಕೊಂಡವು.
ಒಪೆಕ್ ದೇಶಗಳು ದಿನಕ್ಕೆ 10 ಲಕ್ಷ ಬ್ಯಾರಲ್ ಉತ್ಪಾದನೆ ಕಡಿತ ಮಾಡಬಹುದು ಎಂಬುದಾಗಿ ಮಾರುಕಟ್ಟೆಗಳು ಊಹಿಸಿದ್ದವು. ಆದರೆ, ಆ ಗಡುವನ್ನೂ ಮೀರಿ ಕಡಿತ ಮಾಡಲಾಗಿದೆ.
ತೈಲ ದರವನ್ನು ಇಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಒತ್ತಾಯದ ಹೊರತಾಗಿಯೂ ಈ ಬೆಳವಣಿಗೆ ನಡೆದಿದೆ.
Next Story