ಖಾಸಗಿ ಚಾನಲ್ ನ ಲೈವ್ ಕಾರ್ಯಕ್ರಮದಲ್ಲಿ ಬಿಜೆಪಿ-ಎಸ್ಪಿ ನಾಯಕರ ಹೊಡೆದಾಟ
ಹೊಸದಿಲ್ಲಿ, ಡಿ.9: ಖಾಸಗಿ ಚಾನಲ್ ಒಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಹಾಗೂ ಬಿಜೆಪಿ ನಾಯಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ
ಪರಸ್ಪರ ವಾಗ್ವಾದ, ಹೊಡೆದಾಟ ತೀವ್ರವಾದಾಗ ಪೊಲೀಸರನ್ನು ಕರೆಸಲಾಗಿದ್ದು, ಸಮಾಜವಾದಿ ಪಕ್ಷದ ನಾಯಕ ಅನುರಾಗ್ ಭಡೋರಿಯಾ ಅವರನ್ನು ಬಳಿಕ ಪೊಲೀಸರು ವಶಕ್ಕೆ ಪಡೆದರು. ಭಾಟಿಯಾ ಇಡೀ ಪ್ರಕರಣದ ವಿಡಿಯೊವನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಡೋರಿಯಾ ಮತ್ತು ಭಾಟಿಯಾ ಪರಸ್ಪರ ವಾಗ್ವಾದದಲ್ಲಿ ತೊಡಗಿರುವ ಚಿತ್ರಣ ವಿಡಿಯೊದಲ್ಲಿದೆ. ಈ ವಾಗ್ವಾದ ತೀವ್ರವಾಗಿ ಭಡೋರಿಯಾ ಭಾಟಿಯಾ ಅವರನ್ನು ಪಕ್ಕಕ್ಕೆ ತಳ್ಳಿ ಹೊಡೆಯಲು ಮುಂದಾದರು. ಆದರೆ ಸೆಟ್ ನಲ್ಲಿದ್ದ ಸಿಬ್ಬಂದಿ ಮಧ್ಯಪ್ರವೇಶಿಸಿ ಅದನ್ನು ತಡೆದರು.
ಪ್ರತಿಯಾಗಿ ಭಾಟಿಯಾ ಕೂಡಾ ಭಡೋರಿಯಾ ಮೇಲೆ ಹಲ್ಲೆಗೆ ಮುಂದಾಗಿದ್ದು, ಪರಸ್ಪರರು ಹೊಡೆದಾಡಿಕೊಳ್ಳುವ ದೃಶ್ಯ 17 ಸೆಕೆಂಡ್‍ನ ವಿಡಿಯೊದಲ್ಲಿ ದಾಖಲಾಗಿದೆ. ಆದರೆ ಜಗಳ ಯಾರು ಆರಂಭಿಸಿದರು ಎನ್ನುವುದು ಸ್ಪಷ್ಟವಾಗಿಲ್ಲ.
Next Story