ಮಂಗಳೂರಿನಲ್ಲಿ ಟಾಯ್ಸ್ "ಆರ್" ಅಸ್ ಮಳಿಗೆ ಆರಂಭ

ಮಂಗಳೂರು, ಡಿ. 9: ಅಬುಧಾಬಿ ಮೂಲದ ಲೂಲು ಗ್ರೂಪ್ ಇಂಟರ್‍ನ್ಯಾಷನಲ್‍ನ ಅಂಗಸಂಸ್ಥೆಯಾದ ಟೇಬಲ್ಸ್ ಇಂಡಿಯಾ, ಜಾಗತಿಕ ರೀಟೇಲ್ ಬ್ರಾಂಡ್ ಟಾಯ್ಸ್ "ಆರ್" ಅಸ್, ಕಳೆದ ವರ್ಷ ಯಶಸ್ವಿಯಾಗಿ ಬೆಂಗಗಳೂರಿಗೆ ಲಗ್ಗೆ ಇಟ್ಟ ಬಳಿಕ ಹೊಸ ಶಾಖೆಯನ್ನು ಮಂಗಳೂರಿನ ಸಿಟಿ ಸೆಂಟರ್ ಮಾಲ್‍ನಲ್ಲಿ ಇಂದು ತೆರೆದಿದೆ.
ಕ್ರಿಸ್‍ಮಸ್ ಸಂಭ್ರಮಾಚರಣೆಗೆ ವಿಶ್ವ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ವೈವಿಧ್ಯಮಯ ಆಟಿಕೆ, ಗಿಫ್ಟ್ ಮತ್ತಿತರ ವಸ್ತುಗಳು ಇದೀಗ ಹೊಸ ಮಳಿಗೆಯಲ್ಲಿ ಲಭ್ಯ ಎಂದು ಲೂಲು ಗ್ರೂಪ್ ಇಂಟರ್‍ನ್ಯಾಷನಲ್ ಅಧ್ಯಕ್ಷ ಅದೀಬ್ ಅಹ್ಮದ್ ಈ ಸಂದರ್ಭದಲ್ಲಿ ಹೇಳಿದರು.
ಸಂಘಟಿತ ಚಿಲ್ಲರೆ ವಲಯದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿದ್ದು, ಮಂಗಳೂರು ನಗರದಲ್ಲಿ ಇರುವ ಅವಕಾಶವನ್ನು ಮನಗಂಡು ಟೇಬಲ್ಸ್ ಇಂಡಿಯಾ, ಮಂಗಳೂರನ್ನು ತನ್ನ ಗಮ್ಯಸ್ಥಾನವಾಗಿ ಆಯ್ಕೆ ಮಾಡಿಕೊಂಡಿದೆ. ಭಾರತದ 2ನೇ ಮತ್ತು 3ನೇ ಸ್ತರದ ನಗರಗಳಲ್ಲಿ ಪ್ರಗತಿಯ ಯಶೋಗಾಥೆಯನ್ನು ಆರಂಭಿಸುವ ಸಂತಸದ ಕ್ಷಣ ಇದಾಗಿದೆ.
ಟೇಬಲ್ಸ್ ಜಾಗತಿಕವಾಗಿ 60 ಮಳಿಗೆಗಳನ್ನು ಪ್ರಸ್ತುತ ಹೊಂದಿದ್ದು, 2021ರ ಒಳಗಾಗಿ 250 ಮಳಿಗೆಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು. ಈ ಜಾಗತಿಕ ಚಿಲ್ಲರೆ ಬ್ರಾಂಡ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆ ಪಾಲು ಪಡೆಯಲು ಸಜ್ಜಾಗಿದೆ. ಟಾಯ್ಸ್ "ಆರ್" ಅಸ್ ಮಳಿಗೆ, ಆಪ್ಟ್ ವಿಶುವಲ್ ಮರ್ಕೆಂಡೈಸಿಂಗ್ ಸೌಲಭ್ಯದಿಂದ ಸುಸಜ್ಜಿತವಾಗಿದ್ದು, ಇದು ಬಹು ಬ್ರಾಂಡ್‍ಗಳ ಉತ್ಪನ್ನಗಳನ್ನು ಪ್ರದರ್ಶಿಸಲು ಸಾಧ್ಯವಾಗಲಿದೆ. ಕೈಗೆಟುಕುವ ಬೆಲೆಯ ಆಟಿಕೆಗಳಿಂದ ಹಿಡಿದು ಪ್ರಿಮಿಯಂ ಉತ್ಪನ್ನಗಳ ವರೆಗಿನ ವಿಸ್ತøತ ಶ್ರೇಣಿ ಇಲ್ಲಿ ಪ್ರದರ್ಶನಕ್ಕಿದೆ. ಈ ಮಳಿಗೆ ಗ್ರಾಹಕರ ಜತೆ ತಡೆರಹಿತ ಸಂಪರ್ಕ ಸಾಧಿಸಲು ಅನುವಾಗುವಂತೆ ಸಂಘಟಿತ ವಲಯವನ್ನು ಹೊಂದಿದೆ. ಇದು ಆ್ಯಕ್ಷನ್ ಚಿತ್ರಗಳಿಂದ ಹಿಡಿದು, ಡಾಲ್, ಪುಸ್ತಕ, ರೋಲ್ ಪ್ಲೇ ಕಿಟ್, ರಿಮೋಟ್ ಚಾಲಿತ ಕಾರು, ಬ್ಲಾಸ್ಟರ್‍ಗಳು, ಪ್ಲಶ್, ವ್ಹೀಲ್ ಸರಕು, ಬೈಕ್, ರೈಡ್ ಆನ್ ಮತ್ತಿತರ ವೈವಿಧ್ಯಮಯ ಶ್ರೇಣಿಯನ್ನು ಇದು ಒಳಗೊಂಡಿದೆ ಎಂದು ವಿವರಿಸಿದರು.
ಇತ್ತೀಚಿನ ಸೇರ್ಪಡೆಯಲ್ಲಿ ಶೈಕ್ಷಣಿಕ ಆಟಿಕೆಗಳು, ಕಲೆ ಮತ್ತು ಕುಶಲಕಲೆ, ಪುಸ್ತಕಗಳು, ಗೇಮ್ಸ್ ಮತ್ತು ಒಗಟುಗಳು ಹೀಗೆ ಕಲಿಕಾ ವರ್ಗದ ಉತ್ಪನ್ನಗಳು ಸೇರಿವೆ. ಇದು "ಆಟದ ಸಮಯಕ್ಕೆ ಅವಕಾಶ ಮಾಡಿಕೊಳ್ಳಿ" ಎಂಬ ಕಂಪನಿಯ ಸಿದ್ಧಾಂತಕ್ಕೆ ಅನುಗುಣವಾಗಿರುತ್ತದೆ. ಈ ಮೂಲಕ ಆಟಿಕೆಗಳು ಮಕ್ಕಳ ಜೀವನದ ಭಾಗವಾಗಿ ಮಾಡುವುದು ಇದು ಉದ್ದೇಶ. ಮಗು ಸೃಜನಶೀಲತೆ ಹೆಚ್ಚಿಸಿಕೊಳ್ಳುವುದನು ಕಲಿಯಲು, ಕಲಿಕೆಗೆ ಮತ್ತು "ಸ್ಮಾರ್ಟ್ ಆಟ" ಆರಂಭಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಬೇಬೀಸ್ "ಆರ್" ಅಸ್ ವಿಭಾಗವು ಮಗುವಿನ ನಿರೀಕ್ಷೆಯಲ್ಲಿರುವ ಭಾವಿ ತಾಯಂದಿರಿಗೆ, ಯುವ ಪೋಷಕರಿಗೆ ಅತ್ಯುತ್ಕೃಷ್ಟ ಗಮ್ಯತಾಣವಾಗಿದ್ದು, ಇಲ್ಲಿ ಡ್ಯಾಪರ್, ಆಹಾರ, ಒರೆಸುವ ಬಟ್ಟೆಗಳು ಮತ್ತು ಮಗುವಿನ ಪೋಷಣೆಗೆ ಪೋಷಕರಿಗೆ ಅಗತ್ಯವಾದ ಬಹುತೇಕ ಎಲ್ಲ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯನ್ನು ಹೊಂದಿದೆ. ಈ ಮಳಿಗೆಯಲ್ಲಿ ಶಿಶುಗಳ ಉತ್ಪನ್ನಗಳಾದ ಮಗುವಿನ ಹಾಸಿಗೆ, ಹೊದಿಕೆ, ಪ್ರಯಾಣ ಸಾಮಗ್ರಿಗಳು, ಸುರಕ್ಷತೆಗೆ ಅಗತ್ಯವಾದ ಉತ್ಪನ್ನಗಳು, ಶಿಶು ಆರೈಕೆ ಉತ್ಪನ್ನಗಳು, ವಿಶೇಷವಾಗಿ ಮಕ್ಕಳ ಸಿದ್ಧ ಉಡುಪುಗಳೂ ಲಭ್ಯ.
ಎಲ್ಲ ಜನಾಕರ್ಷಣೆಯ ಅದರಲ್ಲೂ ಮುಖ್ಯವಾಗಿ ಮಕ್ಕಳ ಪ್ರಮುಖ ಕೇಂದ್ರಬಿಂದುವೆಂದರೆ ಜಿಯೋಫ್ರೆ ಎಂಬ ಜಿರಾಫೆ. ಇದು ಹಲವು ದಶಕಗಳಿಂದ ಜಾಗತಿಕವಾಗಿ ಟಾಯ್ಸ್ "ಆರ್" ಅಸ್ ಬ್ರಾಂಡ್‍ನ ಅಧಿಕೃತ ಲಾಂಛನವಾಗಿದೆ. ಈ ಮಳಿಗೆಯು ಜಿಯೋಫ್ರೆ ಹುಟ್ಟುಹಬ್ಬ ಕ್ಲಬ್ ಮೂಲಕ ಪ್ರತಿ ತಿಂಗಳು ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುತ್ತಿದೆ ಎಂದರು.