ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್‍ರವರ ಪುತ್ಹಳಿ ನಿರ್ಮಾಣ ಕಾಮಗಾರಿಗೆ ಸಂಸದ ಆರ್.ಧೃವನಾರಾಯಣ್ ಚಾಲನೆ

ಕೊಳ್ಳೇಗಾಲ.ಡಿ.9: ಪಟ್ಟಣದ ವಸಂತಕುಮಾರಿ ಕಾಲೇಜು ಬಳಿಯಿರುವ ಅಂಬೇಡ್ಕರ್ ಸರ್ಕಲ್‍ನಲ್ಲಿ ಭಾನುವಾರ 1.20 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಪುತ್ಹಳಿ ನಿರ್ಮಾಣ ಕಾಮಗಾರಿಗೆ ಸಂಸದ ಆರ್.ಧೃವನಾರಾಯಣ್ ಗುದಲಿಪೂಜೆ ನೇರೆವೇರಿಸಿದರು.
ನಂತರ ಮಾತನಾಡಿದ ಅವರು, ಬಾಬಾ ಸಾಹೇಬ್‍ರ ಪುತ್ಹಳಿ ಸ್ಥಾಪನೆ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಸರ್ಕಲ್ ನಿರ್ಮಿಸಲು ಸುಮಾರು 1.20 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲು ಮುಂದಾಗಿರುವ ಪ್ರಥಮ ದರ್ಜೆ ಗುತ್ತಿಗೆದಾರ ಓಲೆ ಮಹದೇವರವರಿಗೆ ನನ್ನ ವೈಯಕ್ತಿಕ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ನಾವು ಭಾರತದ ಸಂವಿಧಾನ ಶಿಲ್ಪಿ ಭೀಮರಾವ್ ರಾಮಜೀ ಅಂಬೇಡ್ಕರ್ ಜಯಂತಿಯನ್ನು ಪ್ರತಿವರ್ಷ ಏಪ್ರಿಲ್ 14 ರಂದು ಭಾರತದ್ಯಂತ ಆಚರಿಸಲಾಗುತ್ತಿದೆ. ಅಂಬೇಡ್ಕರ್‍ರವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭಾರತೀಯ ನಾಯಕಲೊಬ್ಬರು ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ. ಹೀಗಾಗಿ ಅಂತಹ ಮಹಾವ್ಯಕ್ತಿಯ ಪುತ್ಹಳಿಯನ್ನು ಸರ್ಕಲ್‍ನಲ್ಲಿ ಸ್ಥಾಪಿಸುತ್ತೀರುವುದು ನಮ್ಮೇಲ್ಲರಿಗೂ ಸಂತಸಕರ ವಿಷಯವಾಗಿದೆ ಎಂದು ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಓಲೆ ಮಹದೇವು ಮಾತನಾಡಿ, ಬಾಬಾ ಸಾಹೇಬ್‍ರವರ ಪುತ್ಹಳಿ ಸ್ಥಾಪಿಸುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ಆಗಾಗಿ ಈ ಕೆಲಸ ಪ್ರಾರಂಭದ ಮೇಲೆ ನನಗೆ ಯಾವುದೇ ತರಹದ ಒತ್ತಡ ಮಾಡಬಾರದು. ಹೀಗಾಗಿ ಈ ಕೆಲಸವನ್ನು ಅದಷ್ಟು ಬೇಗನೆ ಮುಗಿಸಿ ಕೋಡುತ್ತೇನೆ ಎಂದು ಸಂಸದರ ಮುಂದೆ ಅವರ ಮನದಾಳದ ಮಾತುಗಳನ್ನು ಹೇಳಿಕೊಂಡರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಎಸ್.ಜಯಣ್ಣ, ಬಾಲರಾಜು ಮಹದೇವ ಸುಪುತ್ರ ಪುನೀತ್ (ಮಹೇಶ್ವರ್), ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಮಧುವನಹಳ್ಳಿ ಶಿವಕುಮಾರ್, ಕೊಪ್ಪಾಳಿ ಮಹದೇವನಾಯ್ಕ, ನಗರಸಭೆ ಸದಸ್ಯರು ಮಂಜುನಾಥ್, ಅಂಬೇಂಡ್ಕರ್ ಸಂಘದ ಅಧ್ಯಕ್ಷ ನಟರಾಜು, ಸಿದ್ದಾಥ್, ಪುಟ್ಟಬುದ್ದಿ, ರಾಜಶೇಖರ್, ಡ್ಯೆರಿಮೂರ್ತಿ, ಚಂದು, ಕೆ.ಕೆ.ಮೂರ್ತಿ, ಶಿವಣ್ಣ, ಪ್ರಭು, ಮುಖಂಡರುಗಳಾದ ರಮೇಶ್, ವರದರಾಜು, ನಾಗರಾಜು, ಶಿವಕುಮಾರ್, ಸಿದ್ದಯ್ಯ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.







