ಉಡುಪಿ: ಸಿಆರ್‌ಝೆಡ್ ವ್ಯಾಪ್ತಿಯ 5 ಮರಳು ದಿಬ್ಬಗಳಿಗೆ ಪರವಾನಿಗೆ
ಉಡುಪಿ, ಡಿ.9: ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ ಸಿಆರ್‌ಝೆಡ್ ವ್ಯಾಪ್ತಿಯಲ್ಲಿನ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಐದು ಮರಳು ದಿಬ್ಬ ಗಳಿಗೆ ಪರವಾನಿಗೆ ನೀಡುವ ಕುರಿತು ಜಿಲ್ಲಾ ಏಳು ಸದಸ್ಯರ ಸಮಿತಿ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆಂದು ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಿಳಿಸಿದೆ.
ಈ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಒಟ್ಟು 9 ಮರಳು ದಿಬ್ಬಗಳ ಪೈಕಿ ಏಳು ಮರಳು ದಿಬ್ಬಗಳಿಗೆ ಕೆಎಸ್‌ಸಿಝೆಡ್‌ಎಂಎಯಿಂದ ಅನುಮೋದನೆ ದೊರೆತಿದ್ದು, ಸೀತಾನದಿಯ ಎರಡು ಮರಳು ದಿಬ್ಬಗಳಿಗೆ ಆಕ್ಷೇಪಣೆ ಬಂದಿ ರುವುದರಿಂದ ಉಳಿದ ಐದು ಮರಳು ದಿಬ್ಬಗಳಿಗೆ ಪರವಾನಿಗೆ ನೀಡಲಾಗುತ್ತಿದೆ. ಅದರಂತೆ 2011ರ ಪೂರ್ವದಲ್ಲಿ ಪರವಾನಿಗೆ ಪಡೆದಿರುವ ಅರ್ಹ 61 ಸಾಂಪ್ರದಾಯಿಕ ಮರಳು ಪರವಾನಿಗೆದಾರರಲ್ಲಿ 45 ಅರ್ಜಿದಾರರು ಮರಳು ದಿಬ್ಬದ ಸಂಖ್ಯೆಯನ್ನು ನಮೂದಿಸಿ ಅರ್ಜಿ ಸಲ್ಲಿಸಿದ್ದು, ಅವರ ಮಾಹಿತಿಯನ್ನು ಐಎಸ್‌ಎಂಎಸ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
ಈ 45 ಜನರಿಗೆ ಸಾಗಾಟ ಪರವಾನಿಗೆಯನ್ನು ಜನರೇಟ್ ಮಾಡುವ ಬಗ್ಗೆ ಜಿಲ್ಲಾಡಳಿತವು ರಾಣೆ ಟಿಫೋರ್‌ಯು ಜಿಪಿಎಸ್ ಸಂಸ್ಥೆಯಿಂದ ತರಬೇತಿ ನೀಡಲಾಗಿದೆ. ಈಗಾಗಲೇ ಐದು ಜನರು ಪರವಾನಿಗೆಯನ್ನು ಹಾಗೂ ಸಾಗಾಟ ಪರವಾನಿಗೆಯನ್ನು ಪಡೆದುಕೊಂಡಿದ್ದು, ಉಳಿದ 40 ಅರ್ಜಿದಾರರೂ ಸಹ ಪರವಾನಿಗೆಯನ್ನು ಪಡೆಯಬೇಕು. ಸಾರ್ವಜನಿಕರು ಈ 45 ಪರವಾನಿಗೆದಾರ ರಿಂದ ಖನಿಜ ಸಾಗಾಟ ಪರವಾನಿಗೆಯೊಂದಿಗೆ ಮರಳನ್ನು ಪಡೆಯಬಹುದು ಎಂದು ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23 ಮರಳು ಬ್ಲಾಕ್‌ಗಳಿಗೆ ಅಧಿಸೂಚನೆ
ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಗಳ ನದಿ ಪಾತ್ರಗಳಲ್ಲಿ ಎಂಟು, ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ 9, ಕುಂದಾಪುರ ತಾಲೂಕಿನಲ್ಲಿ 13 ಸೇರಿದಂತೆ ಒಟ್ಟು 30 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 23 ಮರಳು ಬ್ಲಾಕ್‌ಗಳಿಗೆ ಅಧಿಸೂಚನೆ ಹೊರ ಡಿಸಲಾಗಿದೆ.
ಅಧಿಸೂಚನೆಗೊಂಡಿರುವ 23 ಬ್ಲಾಕ್‌ಗಳಲ್ಲಿ ಆರು ಮರಳು ಬ್ಲಾಕ್‌ಗಳನ್ನು ಸರಕಾರಿ ಕಾಮಗಾರಿಗೆ ಮೀಸಲಿರಿಸಿದ್ದು, 17 ಮರಳು ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಉಳಿದ ಏಳು ಮರಳು ಬ್ಲಾಕ್‌ಗಕಳಿಗೆ ಅಧಿಸೂಚನೆ ಹೊರಡಿಸಿ ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರಕಾರಿ ಮುದ್ರಾಣಲಯ, ಮೈಸೂರು ಇವರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ ಟೆಂಡರ್ ಕರೆಯ ಲಾಗಿರುವ 17 ಮರಳು ಬ್ಲಾಕ್‌ಗಳನ್ನು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಸಾರ್ವಜನಿಕರಿಗೆ ಮರಳು ವಿತರಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಂಡಿಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕುಂದಾಪುರ ತಾಲೂಕಿನ ಗಂಗೊಳ್ಳಿ ಬ್ರೇಕ್ ವಾಟರ್ ಕಾಮಗಾರಿಯಿಂದಾಗಿ ಕೋಡಿ ಭಾಗದಲ್ಲಿ ದಾಸ್ತಾನು ಮಾಡಿರುವ 40000 ಮೆಟ್ರಿಕ್ ಟಕ್ ಮರಳನ್ನು ವಿಲೇವಾರಿ ಮಾಡುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸ ಲಾಗಿದ್ದು, ಸಾರ್ವಜನಿಕರು ಖನಿಜ ಸಾಗಾಟ ಪರವಾನಿಗೆಯೊಂದಿಗೆ ಮರಳನ್ನು ಪಡೆಯಬಹುದಾಗಿದೆ ಎಂದು ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಶೇ.10ರಷ್ಟು ಮರಳು ನಿರ್ಮಿತಿ ಕೇಂದ್ರಕ್ಕೆ
ನಿಗದಿ ಪಡಿಸಿರುವ ಮರಳಿನ ಪ್ರಮಾಣದಲ್ಲಿ ಶೇ.10ರಷ್ಟು ಮರಳನ್ನು ನಿರ್ಮಿತಿ ಕೇಂದ್ರದವರ ನೇಜಾರು ಪ್ರದೇಶದಲ್ಲಿ ನಿರ್ಮಿಸಿರುವ ಸ್ಟಾಕ್ ಯಾರ್ಡ್‌ಗೆ ಹಾಕಲು ಮರಳು ಪರವಾನಿಗೆದಾರರಿಗೆ ಸೂಚಿಸಲಾಗಿದೆ. ಕಡಿಮೆ ವರಮಾನದ ವಸತಿ ಯೋಜನೆಗಳಿಗೆ ನಿರ್ಮಿತಿ ಕೇಂದ್ರದವರ ಸ್ಟಾಕ್ ಯಾರ್ಡ್ ನಿಂದ ಖನಿಜ ಸಾಗಾಟ ಪರವಾನಿಗೆಯೊಂದಿಗೆ ಮರಳನ್ನು ಪಡೆಯಬಹು ದಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ತಿಳಿಸಿದ್ದಾರೆ.







