ಹಿರಿಯರು ಪರಿಚಯಿಸಿದ ಸಂಸ್ಸøತಿಯನ್ನು ಉಳಿಸಿ ಬೆಳೆಸಲು ಅರ್ಜುನ್ ದೇವಯ್ಯ ಕರೆ
ಪುತ್ತರಿ ಊರೊರ್ಮೆ ಸಂತೋಷ ಕೂಟ

ಮಡಿಕೇರಿ ಡಿ.9 : ಗುರು, ಹಿರಿಯರು ಪರಿಚಯಿಸಿದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಪರಂಪರೆಯನ್ನು ಮುಂದಿನ ಜನಾಂಗಕ್ಕಾಗಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕ್ರೀಡಾಪಟು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೊರ್ಮೆ ಸಂತೋಷ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವ ಸಂಸ್ಕೃತಿಯನ್ನು ಮತ್ತೊಂದು ಜನಾಂಗದಲ್ಲಿ ಕಾಣಲು ಸಾಧ್ಯವೇ ಇಲ್ಲ, ಕೊಡವರು ತಮ್ಮ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಆಸ್ತಿ ಕಳೆದುಕೊಂಡರೆ ಅಸ್ತಿತ್ವವೇ ನಾಶವಾಗಲಿದೆ' ಎಂದು ಎಚ್ಚರಿಸಿದರು. ಯಾವ ದೇಶ ತನ್ನ ಸಂಸ್ಕೃತಿ ಮರೆಯುತ್ತಿದೆಯೋ ಆ ದೇಶ ನಾಶವಾಗುತ್ತಿದೆ. ಸಂಸ್ಕೃತಿ ಇರುವುದಿಲ್ಲವೋ ಜನಾಂಗ ಪತನವಾಗುತ್ತದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತೊಬ್ಬರ ಮನಸ್ಸಿಗೆ ಮೆಚ್ಚುಗೆಯಾಗುವ ರೀತಿಯಲ್ಲಿರಬೇಕು ಎಂದು ಸಲಹೆ ನೀಡಿದರು. ಯಾರನ್ನು ಸೋಲಿಸಲು ಪ್ರಯತ್ನಿಸಬಾರದು. ಬದಲಿಗೆ ತಾನು ಗೆಲುವು ಸಾಧಿಸಲು ಪ್ರಯತ್ನಿಸಬೇಕು. ಹೀಗಾದಾಗ ಯಾರ ನಡುವೆಯೂ ದ್ವೇಷ ಹುಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು. ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, `ಪ್ರಕೃತಿ ವಿಕೋಪದಿಂದಾಗಿ ಅದೆಷ್ಟೋ ಕೊಡವ ಜನಾಂಗದವರು ಎಲ್ಲವನ್ನೂ ಕಳೆದುಕೊಂಡು ಕೈ ಚೆಲ್ಲಿ ಕುಳಿತಿದ್ದಾರೆ. ಮುಂದೆಂದೂ ಕೊಡಗಿನಲ್ಲಿ ಈ ರೀತಿಯ ಘಟನೆ ಸಂಭವಿಸದಿರಲಿ' ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೊಡವ ಸಮಾಜದ ಸದಸ್ಯರ ಮಕ್ಕಳಿಗೆ ಅರ್ಜುನ್ ದೇವಯ್ಯ ಪೆÇ್ರೀತ್ಸಾಹ ಧನ ವಿತರಿಸಿದರು. ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಕೊಡವ ಮಕ್ಕಡ ಕೂಟ ಹಾಗೂ ಕೊಡವ ಸಮಾಜ ಪೆÇಮ್ಮಕ್ಕಡ ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.





