ಸಂಪತ್ತಿಗೆ ದೇವರು, ಸಮಾಜವೂ ಪಾಲುದಾರರು: ಪೇಜಾವರ ಶ್ರೀ

ಉಡುಪಿ, ಡಿ.9: ನಮ್ಮ ಪ್ರತಿಯೊಬ್ಬರು ಗಳಿಸಿದ ಸಂಪತ್ತಿಗೆ ದೇವರು ಮತ್ತು ಸಮಾಜವೂ ಪಾಲುದಾರರಾಗಿದ್ದು, ನಾವು ಗಳಿಸಿದ ಸಂಪತ್ತನ್ನು ನಾವು ಮಾತ್ರ ಭೋಗಿಸದೆ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೂ ವಿನಿಯೋಗಿಸಬೇಕು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಆನಂದ ಸಿ.ಕುಂದರ್ ಅವರನ್ನು ರವಿವಾರ ಉಡುಪಿ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಅಭಿನಂದಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಮೇಳದ ಕಲಾವಿದರಿಗೆ ನೀಡಲಾಗುವ ಶೇ. 50ರ ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ವಿತರಿಸಲಾಯಿತು. ಯಕ್ಷಗಾನ ಕಲಾರಂಗ ಅಧ್ಯಕ್ಷ ಕೆ.ಗಣೇಶ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್. ವಿ.ಭಟ್ ಅಭಿನಂದನಾ ಭಾಷಣ ಮಾಡಿದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಟ್ಟಿ ಗಂಗಾಧರ ರಾವ್ ವಂದಿಸಿದರು.
Next Story