ಕೊಳಗೇರಿಯಲ್ಲಿ 500 ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ

ಮಲ್ಪೆ, ಡಿ.9: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ 500 ಮನೆಗಳ ಶಿಲಾನ್ಯಾಸ ಕಾರ್ಯ ಕ್ರಮವನ್ನು ಶಾಸಕ ಕೆ ರಘುಪತಿ ಭಟ್ ರವಿವಾರ ಪಾಳೆಕಟ್ಟೆ ಕೊಡವೂರು ಮತ್ತು ಬಲರಾಮ್ ನಗರದಲ್ಲಿ ನೆರವೇರಿಸಿದರು.
ಬಡತನವನ್ನು ಮೆಟ್ಟಿ ನಿಲ್ಲುವ ಉದ್ಧೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಯೋಜನೆಗೆ ಈಗ ಮತ್ತಷ್ಟು ಬಲ ಬಂದಿದೆ. ಸಮಾಜದ ಅತ್ಯಂತ ಕೆಳಗಿನ ವ್ಯಕ್ತಿಯೂ ಸೂರುವಂಚಿತರಾಗಬಾರದು ಎಂಬ ಸಂಕಲ್ಪ ಈ ಮೂಲಕ ಸಾಕಾರಗೊಳ್ಳುತ್ತಿದೆ. ಶೀಘ್ರ ಉಡುಪಿಯಲ್ಲಿ 500 ಮನೆಗಳು ಬಡ ಜನತೆಗೆ ಸಿಗುವಂತಾಗಲಿದೆ ಎಂದು ರಘುಪತಿ ಭಟ್ ತಿಳಿಸಿದರು.
ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು, ಲಕ್ಷ್ಮೀ ಮಂಜುನಾಥ್ ಕೊಳ, ಹೆಡ್ಲಿನ್ ಕರ್ಕಡ, ಶ್ರೀಶ ಮೂಡುಬೆಟ್ಟು, ಸುಂದರ್ ಕಲ್ಮಾಡಿ, ಯೋಗೀಶ್ ಸಾಲ್ಯಾನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಮಾಜಿ ನಗರಸಭೆ ಸದಸ್ಯ ಪಾಂಡುರಂಗ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.
Next Story