ಎಸ್ಸೆಸ್ಸೆಫ್ ಪೆರಿಯಪಾದೆ ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ,ಡಿ.10: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್, ಪೆರಿಯಪಾದೆ ಶಾಖೆ ಇದರ ಮಹಾಸಭೆ ಶಾಖಾಧ್ಯಕ್ಷ ಹಾರಿಸ್ ಪೆರಿಯಪಾದೆಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಶಾಖೆಯ ಸ್ಥಾಪಕ ಅಧ್ಯಕ್ಷ ಝೈನುದ್ದೀನ್ ಸಅದಿ ಪ್ರಾರ್ಥಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ಬತ್ತಾ ಸೆಕ್ಟರ್ ನಾಯಕ ಇಲ್ಯಾಸ್ ಲತೀಫಿ ತರಗತಿ ನಡೆಸಿಕೊಟ್ಟರು. ಸೆಕ್ಟರ್ ನಾಯಕರಾದ ರಿಯಾಝ್ ಪಾದಿಲ ಹಾಗೂ ಸಂಶುದ್ದೀನ್ ಪಾದಿಲ ವೀಕ್ಷಕರಾಗಿ ಆಗಮಿಸಿದರು. ಎಸ್.ವೈ.ಎಸ್ ಪೆರಿಯಪಾದೆ ಬ್ರಾಂಚ್ ಅಧ್ಯಕ್ಷ ಆದಂ ಗಣಪಳಿಕೆ ಹಾಗೂ ಪ್ರಧಾನ ಕಾರ್ಯದರ್ಶಿ ಆದಂ ಬೊಟ್ಟು ಉಪಸ್ಥಿತರಿದ್ದರು. ನಂತರ ನೂತನ ಸಾಲಿನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಕ್ರಂ ಪೆರಿಯಪಾದೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್ ಪೆರಿಯಪಾದೆ ನೇಮಕಗೊಂಡರು. ಕೋಶಾಧಿಕಾರಿಯಾಗಿ ಹಾರಿಸ್ ಪೆರಿಯಪಾದೆ, ಉಪಾಧ್ಯಕ್ಷರಾಗಿ ಸ್ವಾದಿಖ್ ಹಾಗೂ ಸಲ್ಮಾನ್, ಜೊತೆ ಕಾರ್ಯದರ್ಶಿಯಾಗಿ ಜಲೀಲ್ ಇವರನ್ನು ಆಯ್ಕೆ ಮಾಡಲಾಯಿತು. ಶಾಖೆಯ ಪ್ರ.ಕಾರ್ಯದರ್ಶಿ ಸಂಶುದ್ದೀನ್ ದನ್ಯವಾದ ಅರ್ಪಿಸಿದರು.