ಆಶಿಕ್ ಕುಕ್ಕಾಜೆಗೆ ಸೇವಾ ರತ್ನ ಪ್ರಶಸ್ತಿ

ಮಂಗಳೂರು, ಡಿ.10: ಚಿಕ್ಕಮಗಳೂರಿನ ಮೂಡಿಗೆರೆ ಪೀಸ್ ಎವರ್ನೆಸ್ ಟ್ರಸ್ಟ್ (ರಿ.)ವತಿಯಿಂದ ಡಿ.16ರಂದು ಮೂಡಿಗೆರೆ ಜೇಸಿ ಭವನದಲ್ಲಿ ನಡೆಯುವ ಟ್ರಸ್ಟ್‌ನ 4ನೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಯುವ ಸಮಾಜ ಸೇವಕ ಆಶಿಕ್ ಕುಕ್ಕಾಜೆಗೆ ‘ಸೇವಾ ರತ್ನ’ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಸಾಮಾಜಿಕ ತಾಣಗಳಲ್ಲಿ ಬಡ ರೋಗಿಗಳ, ಅಶಕ್ತರ ಬಗ್ಗೆ ಬರಹಗಳನ್ನು ಬರೆದು ಧನ ಸಂಗ್ರಹಿಸಿ ನೆರವು ನೀಡುವುದರ ಮೂಲಕ ಗಮನ ಸೆಳೆದಿರುವ ಆಶಿಕ್‌ರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
Next Story