Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
  4. ದೇವರ ಸನ್ನಿಧಿಯಲ್ಲಿ ಲೆನಿನ್

ದೇವರ ಸನ್ನಿಧಿಯಲ್ಲಿ ಲೆನಿನ್

ಅಲ್ಲಾಮಾ ಸರ್ ಮುಹಮ್ಮದ್ ಇಕ್ಬಾಲ್. ಅನುವಾದ: ಎ.ಹಾಜಿರಾ ಪುತ್ತಿಗೆ

ವಾರ್ತಾಭಾರತಿವಾರ್ತಾಭಾರತಿ11 Dec 2018 5:18 PM IST
share
ದೇವರ ಸನ್ನಿಧಿಯಲ್ಲಿ ಲೆನಿನ್

ಅಲ್ಲಾಮಾ ಸರ್ ಮುಹಮ್ಮದ್ ಇಕ್ಬಾಲ್. ಅನುವಾದ: ಎ.ಹಾಜಿರಾ ಪುತ್ತಿಗೆ

ನಿನ್ನ ನಿದರ್ಶನಗಳು ಜಗದಲೆಲ್ಲ ಎಲ್ಲ ಜೀವಗಳಲ್ಲೂ ಮೆರೆಯುತ್ತಿವೆ,

ನಿನ್ನ ಅಸ್ತಿತ್ವವು ಅನಂತವಾಗಿದೆ ಎಂಬುದೇ ಪರಮ ಸತ್ಯವು

ನಿನ್ನ ಅಸ್ತಿತ್ವ ಸತ್ಯವೋ ಅಲ್ಲವೋ ಎಂಬುದನ್ನು ಹೇಗೆ ತಾನೇ ಅರಿಯಲಿ ನಾನು?

ಕ್ಷಣ ಕ್ಷಣವೂ ಬದಲಾಗುತ್ತಲಿರುತ್ತವೆ ಬುದ್ಧಿಯ ವಿಚಾರಗಳು

ಗ್ರಹಗಳ ವೀಕ್ಷಕರಿರಲಿ, ಸಸ್ಯ ಶಾಸ್ತ್ರದ ಪ್ರವೀಣರಿರಲಿ,

ಪ್ರಕೃತಿಯ ಕಾಲಾತೀತ ಸಂಗೀತವನ್ನು ಬಲ್ಲವರಲ್ಲ

ಇಂದು ಕಣ್ತೆರೆದು ನೋಡಿದಾಗ ಮನವರಿಕೆಯಾಯಿತು,

ಮಂದಿರಗಳ ಕಟ್ಟಳೆಗಳೆಂದು ನಾನಂದು ಕೊಂಡಿದ್ದೆಲ್ಲವೂ ಸತ್ಯವಾಗಿತ್ತೆಂದು

ಹಗಲು -ಇರುಳುಗಳ ಸರಪಣಿಯಲ್ಲಿ ಸಿಕ್ಕ ದಾಸರು ನಾವು,

ನೀನಾದರೋ, ಸಕಲ ಕಾಲಗಳ ಮತ್ತು ಅಮಿತ ವೈಶಾಲ್ಯಗಳ ಸೃಷ್ಟಿಕರ್ತನು.

ನೀನು ಅನುಮತಿಸಿದರೆ ನಾನೊಂದು ಮಾತ ಕೇಳುವೆ,

ಮಹಾ ಜಾಣರ ಬರಹಗಳಿಂದ ಬಗೆಹರಿಯದ ಒಗಟದು

ಬಾನ ತಳದ ಶಿಬಿರದಲ್ಲಿ ನಾನಿದ್ದಷ್ಟು ಕಾಲ ಸದಾ ಮುಳ್ಳಂತೆ ಚುಚ್ಚುತ್ತಲೇ ಇದ್ದ ಒಗಟದು

ಮಾತಿನ ಧಾಟಿಯ ಮೇಲೆ ನಿಯಂತ್ರಣ ಉಳಿದಿರುವುದಿಲ್ಲ,

ಆತ್ಮದೊಳಗೆ ವಿಚಾರಗಳು ಭೋರ್ಗರೆಯತೊಡಗಿದಾಗ

ಯಾವ ಮಾನವನ ದೇವರು ನೀನು?

ನೀನೇನು, ಬಾನಿನಡಿ ಬದುಕುತ್ತಿರುವ ಮಾನವನ ದೇವರೇ?

ಪಶ್ಚಿಮದ ಬಿಳಿ ತೊಗಲಿನವರು ಪೌರ್ವಾತ್ಯರ ದೇವರಾಗಿ ಬಿಟ್ಟಿರುವರು,

ಹೊಳೆಯುವ ಲೋಹಗಳನ್ನೇ ಪಾಶ್ಚಿಮಾತ್ಯರು ದೇವರಾಗಿಸಿ ಬಿಟ್ಟಿರುವರು.

ಯುರೋಪಿನಲ್ಲಿ ವಿದ್ಯೆ ಮತ್ತು ಕಲೆಗಳ ಬೆಳಕು ಧಾರಾಳವಾಗಿದೆ,

ಆದರೆ ನಿಜವಾಗಿ ಅದು ಕತ್ತಲಲ್ಲಿ ಅಲೆಯುವ ಕಣ್ಣಿಲ್ಲದ ಪಶುವಿನಂತಾಗಿ ಬಿಟ್ಟಿದೆ.

ಕಲೆಯ ದೃಷ್ಟಿಯಿಂದಲೂ, ಗಾತ್ರದಲ್ಲೂ ವೈಭವದಲ್ಲೂ ಬ್ಯಾಂಕುಗಳ ಕಟ್ಟಡಗಳು ಇಗರ್ಜಿಗಳಿಗಿಂತ ತುಂಬಾ ಮುಂದಿವೆ,

ಮೇಲುನೋಟಕ್ಕಿದು ವ್ಯಾಪಾರ,ಆದರೆ ವಾಸ್ತವದಲ್ಲಿ ಜೂಜು ಮಾತ್ರ ಇಲ್ಲಿ ಒಬ್ಬನ ಲಾಭ (ಬಡ್ಡಿ )ಲಕ್ಷಾಂತರ ಮಂದಿಯ ಪಾಲಿಗೆ ಮರಣದ ಸಂದೇಶವಾಗಿರುತ್ತದೆ.

ಅವರ ವಿದ್ಯೆ ಇರಲಿ, ಜಾಣ್ಮೆ ಇರಲಿ, ಯೋಜನೆಗಳಿರಲಿ, ಸರಕಾರವಿರಲಿ,

ಅವರು ಸಮಾನತೆಯ ಉಪದೇಶ ನೀಡುತ್ತಿರುತ್ತಾರೆ ಮತ್ತು ಜನರ ರಕ್ತ ಹೀರುತ್ತಿರುತ್ತಾರೆ.

ನಿರುದ್ಯೋಗ, ನಗ್ನತೆ, ಮದ್ಯ ವ್ಯಸನ ಮತ್ತು ದಾರಿದ್ರ

ಬಿಳಿಯರ ನಾಗರಿಕತೆಯ ಯಶೋಗಾಥೆಗೆ ಇನ್ನು ಏನೇನನ್ನು ಸೇರಿಸೋಣ!

ದಿವ್ಯ ಮಾರ್ಗದರ್ಶನದಿಂದ ವಂಚಿತ ಜನಾಂಗವು ಎಷ್ಟು ಸಾಧಿಸಿದರೂ ಉಗಿ (ಬಂಡಿ)ಮತ್ತು ವಿದ್ಯುತ್ತಿನ ಮೇರೆಗಳನ್ನು ದಾಟಲಾರದು.

ಯಂತ್ರಗಳ ಆಧಿಪತ್ಯವು ಮನಸ್ಸುಗಳ ಪಾಲಿಗೆ ಮರಣವಾಗಿದೆ,

ಉಪಕರಣಗಳು ವಾತ್ಸಲ್ಯದ ಭಾವನೆಯನ್ನೇ ಹೊಸಕಿ ಹಾಕುತ್ತವೆ,

ಕೆಲವು ಲಕ್ಷಣಗಳು ಈಗಾಗಲೇ ತಲೆದೋರ ತೊಡಗಿವೆ,

ವಿಧಿಯ ತಜ್ಞನ ಕೈಯಲ್ಲಿ,ಯೋಜನೆಗಳ ಪ್ರವೀಣರು ಸೋಲುಂಡಂತಿದೆ

ಪಾನ ಶಾಲೆಯ ಅಡಿಪಾಯ ಅಲುಗಾಡಿದೆ,

ನಾಶವಾದ ನಾಡಿನ ಮುದಿ ತಲೆಗಳು ಚಿಂತಾ ಕ್ರಾಂತವಾಗಿವೆ.

ಸಂಜೆ ಹೊತ್ತು ಅವರ ಮುಖದಲ್ಲಿ ಕಾಣಿಸುವ ಕೆಂಬಣ್ಣವೆಲ್ಲ ಒಂದೋ ಅಲಂಕಾರ ದ್ರವದ ಫಲವಾಗಿದೆ,ಅಥವಾ ಮದಿರೆಯ ಪ್ರಭಾವವಾಗಿದೆ.

ನೀನು ಭಾರಿ ಶಕ್ತಿಶಾಲಿ ಮತ್ತು ನ್ಯಾಯಶೀಲನು ಹೌದು,

ಆದರೆ ನಿನ್ನ ಜಗದಲ್ಲಿ ಕಾರ್ಮಿಕರು ತೀರಾ ದುಸ್ಥಿತಿಯಲ್ಲಿ ನರಳುತ್ತಿದ್ದಾರೆ.

ಬಂಡವಾಳಶಾಹಿಯ ಹಡಗು ಎಂದು ಮುಳುಗಿ ಹೋದೀತು?

ನಿನ್ನ ಜಗತ್ತು ನಿನ್ನ ಅಂತಿಮ ನ್ಯಾಯಕ್ಕಾಗಿ ಕಾಯುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X