ಸೈಬರ್ ಭದ್ರತೆ ನಿಯಮ ಉಲ್ಲಂಘನೆ: ಇಂಡಿಯನ್ ಬ್ಯಾಂಕ್ಗೆ 1 ಕೋ. ರೂ. ದಂಡ ವಿಧಿಸಿದ ಆರ್ಬಿಐ

ಹೊಸದಿಲ್ಲಿ, ಡಿ. 11: ಭದ್ರತಾ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಇಂಡಿಯನ್ ಬ್ಯಾಂಕ್ ಗೆ 1 ಕೋ. ರೂ. ದಂಡ ವಿಧಿಸಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಹೇಳಿದೆ. ಬ್ಯಾಂಕ್ಗಳ ಸೈಬರ್ ಭದ್ರತಾ ಚೌಕಟ್ಟಿನ ಕುರಿತ ಸುತ್ತೋಲೆಯನ್ನು ಉಲ್ಲಂಘಿಸಿರುವುದಕ್ಕಾಗಿ ಇಂಡಿಯನ್ ಬ್ಯಾಂಕ್ ಮೇಲೆ 2019 ನವೆಂಬರ್ 30ರಂದು 1 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆರ್ಬಿಐ ಹೇಳಿದೆ. ವಂಚನೆಗಳು-ವರ್ಗೀಕರಣ ಹಾಗೂ ವರದಿಗಳ ಕುರಿತು ಆರ್ಬಿಐ ನೀಡಿದ ನಿರ್ದೇಶನವನ್ನು ಇಂಡಿಯನ್ ಬ್ಯಾಂಕ್ ಅನುಸರಿಸಿರಲಿಲ್ಲ.
ಆರ್ ಬಿಐ ನೀಡಿದ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿರುವುದನ್ನು ಪರಿಗಣಿಸಿ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಆರ್ಬಿಐ ಹೊಂದಿರುವ ಅಧಿಕಾರದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ ಎಂದು ಆರ್ಬಿಐ ಹೇಳಿದೆ.
Next Story