ಸಜೀಪನಡು: ಡಿ.12ರಂದು ಆದರ್ಶ್ ಇಂಗ್ಲೀಷ್ ಮೀಡಿಯಂ ಶಾಲಾ ವಾರ್ಷಿಕೋತ್ಸವ
ಬಂಟ್ವಾಳ,ಡಿ.11: ಆದರ್ಶ ಇಂಗ್ಲೀಷ್ ಮೀಡಿಯಂ ಶಾಲೆ, ಸಜೀಪನಡು ಇದರ ವಾರ್ಷಿಕೋತ್ಸವ ಸಮಾರಂಭವು ಡಿ.12 ರಂದು ಬುಧವಾರ ಬೆಳಗ್ಗೆ 9:30 ಕ್ಕೆ ಶಾಲಾ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಬಂಟ್ವಾಳ ತಾಲೂಕು ಬಿಇಒ ಶಿವ ಪ್ರಕಾಶ್ ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್, ಮಾಜಿ ಸಚಿವ ರಮಾನಾಥ ರೈ, ಅಮ್ಮೆಂಬಳ ಚರ್ಚ್ ನ ರೆ.ಫಾ. ಲಾರೆನ್ಸ್ ಮಸ್ಕರೆನ್ಹಾಸ್, ಕೆಪಿಸಿಸಿ ಕಾರ್ಯದರ್ಶಿ ರಾಜಶೇಕರ್ ಕೋಟ್ಯಾನ್, ದ.ಕ ಮತ್ತು ಉಡುಪಿ ಜಿಲ್ಲಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಅಸೋಷಿಯೇಶನ್ ಅಧ್ಯಕ್ಷ ಮುಹಮ್ಮದ್ ಬ್ಯಾರಿ, ಹಾಸ್ಯ ನಟ ಮಂಜು ರೈ ಮೂಳೂರು, ಹಾಜಿ ಎಸ್.ಅಬ್ಬಾಸ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿಲಿದ್ದಾರೆ. ಹಾಗೂ ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಶಾಲಾ ಕಾರ್ಯದರ್ಶಿ ಅಬ್ದುಲ್ ಜಸೀಮ್ ಪ್ರಕಟನೆ ತಿಳಿಸಿದೆ.