ಕೊಪ್ಪ: ಬದ್ರಿಯಾ ಖತೀಜಮ್ಮ ನಿಧನ

ಕೊಪ್ಪ, ಡಿ. 11: ಜನತಾದಳ ಮುಖಂಡ, ಕೊಪ್ಪ ಬದ್ರಿಯಾ ಹೋಟೆಲ್ ಮುಹಮ್ಮದ್ ಅವರ ತಾಯಿ ಖತೀಜಮ್ಮ (85) ಮಂಗಳವಾರ ಮಧ್ಯಾಹ್ನ ನಿಧನರಾದರು.
ಖತೀಜಮ್ಮ ಅವರ ಬದ್ರಿಯಾ ಹೋಟೆಲ್ ಕೈರುಚಿ ಮಲೆನಾಡಿನಾದ್ಯಂತ ಪ್ರಸಿದ್ಧವಾಗಿದೆ. ನಾನ್ ವೆಜ್ ಬಳಸುವ ಮಲೆನಾಡಿನ ಹೆಚ್ಚಿನವರು ಖತೀಜಮ್ಮರವರ ಊಟದ ರುಚಿ ಸವಿದಿದ್ದಾರೆ. ಅವರ ಊಟದ ರುಚಿ ಸವಿದವರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯ ಮಂತ್ರಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಕೂಡ ಪ್ರಮುಖರು. ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಮೊದಲಾದವರು ಖತೀಜಮ್ಮರವರ ಕೈರುಚಿ ಉಂಡವರು.
ಬದ್ರಿಯಾ ಹೋಟೆಲ್ ಕುಟುಂಬದ ಆತ್ಮೀಯ ದಿವಂಗತ ಎಚ್.ಜಿ.ಗೋವಿಂದೇ ಗೌಡರಿಗೆ ಖತೀಜಮ್ಮರವರ ಸಾರಿನ ರುಚಿ ಅಪಾರ ಇಷ್ಟವಾಗಿತ್ತು. ಖತೀಜಮ್ಮರ ನಿಧನಕ್ಕೆ ಶಾಸಕ ಟಿ.ಡಿ.ರಾಜೇಗೌಡರು ಬದ್ರಿಯಾ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸಿದ್ದಾರೆ.
ಮೃತರು ಐವರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story