ರಮಣ ಸಿಂಗ್ರಿಂದ 15 ವರ್ಷಗಳ ಬಳಿಕ ಕೈತಪ್ಪಿದ ಛತ್ತೀಸ್ಗಢ
![ರಮಣ ಸಿಂಗ್ರಿಂದ 15 ವರ್ಷಗಳ ಬಳಿಕ ಕೈತಪ್ಪಿದ ಛತ್ತೀಸ್ಗಢ ರಮಣ ಸಿಂಗ್ರಿಂದ 15 ವರ್ಷಗಳ ಬಳಿಕ ಕೈತಪ್ಪಿದ ಛತ್ತೀಸ್ಗಢ](https://www.varthabharati.in/sites/default/files/images/articles/2018/12/11/167477.jpeg)
ರಾಯಪುರ, ಡಿ. 11: ಛತ್ತೀಸ್ಗಢ ವಿಧಾನ ಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುವ ಮೂಲಕ ಬಿಜೆಪಿಯ ರಮಣ್ ಸಿಂಗ್ ಇಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ನಿರ್ಮಿಸಿದ ದಾಖಲೆ ಇಂದು ಅಂತ್ಯ ಕಂಡಿದೆ.
ಛತ್ತೀಸ್ಗಢವನ್ನು ನಿರಂತರ 15 ವರ್ಷಗಳ ಕಾಲ ಆಳಿದ ರಮಣ ಸಿಂಗ್ ಬಿಜೆಪಿಯ ಪ್ರಭಾವಿ ಮುಖ್ಯಮಂತ್ರಿ. ಗುಜರಾತ್ನಲ್ಲಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ತಲಾ 13 ವರ್ಷಗಳ ಕಾಲ ಮಾತ್ರ ಆಡಳಿತ ನಡೆಸಿದ್ದಾರೆ. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಹಾಗೂ ಆಡಳಿತವನ್ನು ಮುಂದಿಟ್ಟು ಕೊಂಡು ರಮಣ ಸಿಂಗ್ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯಲಿದೆ ಎಂದು ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು.
ಕೆಲವು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಜಯ ಗಳಿಸುತ್ತದೆ ಎಂದು ಹೇಳಿತ್ತು. ಛತ್ತೀಸ್ಗಢ ವಿಧಾನ ಸಭೆಯಲ್ಲಿ ಒಟ್ಟು 90 ಸ್ಥಾನಗಳಿವೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 49 ಹಾಗೂ ಕಾಂಗ್ರೆಸ್ 39 ಸ್ಥಾನಗಳನ್ನು ಪಡೆದುಕೊಂಡಿತ್ತು.